ಟರ್ಫ್‌ ಕ್ಲಬ್‌ ಮೆಂಬರ್‌ಶಿಪ್‌ ಕೊಡಿಸಲು ಸಿದ್ದರಾಮಯ್ಯ 1.30 ಕೋಟಿ ಲಂಚ ತಗೊಂಡಿದ್ದಾರೆ: ಶೋಭಾ ಕರಂದ್ಲಾಜೆ ಆರೋಪ

ಬೆಂಗಳೂರು: ಇಲ್ಲಿನ ಟರ್ಫ್ ಕ್ಲಬ್ ಮೆಂಬರ್‌ಶಿಫ್ ಕೊಡಿಸಲು ಸಿಎಂ ಸಿದ್ದರಾಮಯ್ಯ ಲಂಚ ಪಡೆದಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಸಿಎಂ ಸಿದ್ದರಾಮಯ್ಯ (Siddaramaiah) ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟರ್ಫ್ ಕ್ಲಬ್‌ನಲ್ಲಿ ವಿವೇಕಾನಂದ ಎನ್ನುವವರಿಗೆ ಮೆಂಬರ್‌ಶಿಫ್ (ಸ್ಟುವರ್ಟ್) ಕೊಡಿಸೋಕೆ 1.30 ಕೋಟಿ ರೂ. ಹಣ ಸಿದ್ದರಾಮಯ್ಯ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮುಡಾದಲ್ಲಿ 1992ರ ಪ್ರಮುಖ ದಾಖಲೆಗಳೇ ನಾಪತ್ತೆ – ಇ.ಡಿ ಅಧಿಕಾರಿಗಳು ಶಾಕ್!

ಸಿದ್ದರಾಮಯ್ಯ ಚೆಕ್‌ನಲ್ಲಿ ಈ ಹಣ ಪಡೆದಿದ್ದಾರೆ. ಈ‌ ಸಂಬಂಧ ಪೊಲೀಸರು ಬಿ ರಿಪೋರ್ಟ್ ಹಾಕಿದ್ರು. ಇದಕ್ಕೆ ಕೋರ್ಟ್ ಛೀಮಾರಿ ಹಾಕಿದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಕೋರ್ಟ್ ಹೇಳಿದೆ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಅಪರಾಧಿ. ಚೆಕ್‌ನಲ್ಲಿ ಹಣ ಪಡೆದಿರೋರು ಸಿದ್ದರಾಮಯ್ಯ. ಇಂತಹವರು ಬೇರೆಯವರ ಬಗ್ಗೆ ಮಾತಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: MUDA Case: ತಡರಾತ್ರಿವರೆಗೂ ದೇವರಾಜ್‌ ಮನೆಯಲ್ಲಿ ಇಡಿ ವಿಚಾರಣೆ