ಪಾಕ್ ಕ್ರಿಕೆಟಿಗ ಹಸನ್ ಅಲಿ ದಂಪತಿಗೆ ಸಾನಿಯಾ ಮಿರ್ಜಾ ಡಿನ್ನರ್

ದುಬೈ: ಕೆಲ ದಿನಗಳ ಹಿಂದೆ ಭಾರತ ಮೂಲದ ಯುವತಿಯನ್ನು ಮದುವೆಯಾಗಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲರ್ ಹಸನ್ ಅಲಿ ದಂಪತಿಗೆ ಸಾನಿಯಾ ಮಿರ್ಜಾ ದಂಪತಿ ಡಿನ್ನರ್ ಪಾರ್ಟಿ ನೀಡಿದ್ದಾರೆ.

ಅಗಸ್ಟ್ 20 ರಂದು ಭಾರತ ಮೂಲದ ಶಮಿಯಾ ಆರ್ಜೂ ಅವರನ್ನು ಹಸನ್ ಅಲಿ ಮದುವೆಯಾಗಿದ್ದರು. ದುಬೈನ ಅಟ್ಲಾಂಟಿಸ್ ಪಾಮ್ ಜಮೈರಾ ಪಾರ್ಕ್ ಹೋಟೆಲ್‍ನಲ್ಲಿ ಇಬ್ಬರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಸದ್ಯ ಈ ದಂಪತಿಯನ್ನು ವಿವಾಹಕ್ಕೆ ಶುಭ ಕೋರಿರುವ ಸಾನಿಯಾ ಮಿರ್ಜಾ ಹಾಗೂ ಶೋಯಿಬ್ ಮಲಿಕ್ ದಂಪತಿ ದುಬೈನ ತಮ್ಮ ನಿವಾಸದಲ್ಲಿ ಡಿನ್ನರ್ ಪಾರ್ಟಿ ಏರ್ಪಡಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಡಿನ್ನರ್ ಪಾರ್ಟಿ ವೇಳೆ ತೆಗೆದ ಫೋಟೋಗಳನ್ನು ಶಮಿಯಾ ಆರ್ಜೂ ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ತಮಗೇ ನೀಡಿದ್ದ ಆತಿಥ್ಯಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಂದಹಾಗೇ ಶಮಿಯಾ ಆರ್ಜೂ ಹರ್ಯಾಣದ ನೂಹ ಜಿಲ್ಲೆಯವರಾಗಿದ್ದು ದುಬೈನಲ್ಲಿ ನೆಲೆಸಿದ್ದಾರೆ.

ಅಂದಹಾಗೇ ಸಾನಿಯಾ ಮಿರ್ಜಾ ಪಾಕ್ ಕ್ರಿಕೆಟಿಗ ಶೋಯಿಬ್ ಮಲಿಕ್‍ರನ್ನು 2010 ಏಪ್ರಿಲ್ ನಲ್ಲಿ ಮದುವೆಯಾಗಿದ್ದರು. ಇಬ್ಬರಿಗೂ 10 ತಿಂಗಳ ಗಂಡು ಮಗು ಕೂಡ ಇದೆ. ಇತ್ತೀಚೆಗೆ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಪಾಕ್ ತಂಡ ಹೊರಬಿದ್ದ ಬಳಿಕ ಮಲಿಕ್ ಏಕದಿನ ಕ್ರಿಕೆಟ್‍ಗೆ ವಿವಾದಯ ಹೇಳಿದ್ದರು. ಇತ್ತ ಮಗುವಾದ ಬಳಿಕ ಟೆನ್ನಿಸ್ ನಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಲು ಸಿದ್ಧತೆ ನಡೆಸಿರುವ ಸಾನಿಯಾ ಮಿರ್ಜಾ ದೇಹದ ತೂಕವನ್ನು ಇಳಿಸಿಕೊಂಡು ಸುದ್ದಿಯಾಗಿದ್ದರು.

Comments

Leave a Reply

Your email address will not be published. Required fields are marked *