‘ನಾನು ಮತ್ತು ಗುಂಡ’ನಿಗೆ ಶಬ್ಬಾಶ್ ಗಿರಿ!

ಕಾಮಿಡಿ ಕಿಲಾಡಿಗಳು ಶಿವರಾಜ್ ಕೆ.ಆರ್.ಪೇಟೆ ನಟಿಸುತ್ತಿರುವ ಸಿನಿಮಾ ‘ನಾನು ಮತ್ತು ಗುಂಡ’. ಶಿವರಾಜ್ ಕೆ. ಆರ್ ಪೇಟೆ ಎಂದಾಕ್ಷಣಾ ಅಲ್ಲೊಂದು ಕಾಮಿಡಿ ನೆನಪಾಗುತ್ತದೆ. ಸಿನಿಮಾದಲ್ಲೂ ಕಾಮಿಡಿ ಇರಬಹುದು ಎಂಬ ಊಹೆ ಎಲ್ಲರಲ್ಲೂ ಮೂಡುತ್ತೆ. ಆದ್ರೆ ಈ ಸಿನಿಮಾ ಮನುಷ್ಯ ಹಾಗೂ ಪ್ರಾಣಿ ನಡುವಿನ ಭಾವನಾತ್ಮಕ ಸಂಬಂಧವನ್ನು ಅನಾವರಣಗೊಳಿಸಲು ಸಜ್ಜಾಗಿದೆ.

ಸದ್ಯ ರಿಲೀಸ್ ಗೆ ರೆಡಿಯಾಗಿರುವ ಸಿನಿಮಾಗೆ ಹೊಗಳಿಕೆಯ ಸುರಿಮಳೆ ಸುರೀತಾ ಇದೆ. ಸಿನಿಮಾ ಸೆನ್ಸಾರ್ ಗೆ ಹೋಗಿದ್ದು, ಶಬ್ಬಾಶ್ ಗಿರಿಯನ್ನ ಪಡೆದಿದೆ. ಸೆನ್ಸಾರ್ ನಿಂದ ಹೊಗಳಿಕೆ ಸಿಕ್ಕಿರುವ ಕಾರಣ ಚಿತ್ರತಂಡ ಸಿಕ್ಕಾಪಟ್ಟೆ ಖುಷಿಯಲ್ಲಿದೆ. ಈಗಾಗಲೇ ಪೋಸ್ಟರ್ ನಿಂದ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರ, ಅಯ್ಯಯ್ಯೋ ರಾಮ ರಾಮ ಎಂಬ ಹಾಡನ್ನು ರಿಲೀಸ್ ಮಾಡಿದೆ. ಕ್ಯಾಚಿ ಲಿರಿಕ್ಸ್ ನಿಂದ ಹಾಡು ಎಲ್ಲರನ್ನು ಮನಸೂರೆಗೊಳಿಸಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ಲಭ್ಯವಿದ್ದು, ಕೇಳಿ ಆನಂದಿಸಬಹುದು.

ಹಾಡು ನೋಡಿದರೇ ಒಂದು ಹಂತಕ್ಕೆ ಸಿನಿಮಾ ಹೇಗಿರಬಹುದು ಎಂಬುದು ತಿಳಿಯುತ್ತದೆ. ಆಟೋ ಡ್ರೈವರ್ ಶಂಕರನ ಬೆನ್ನತ್ತೋ ಗುಂಡನ ಕಾಟ ತಡೆಯಲಾರದ ಶಂಕರನ ಪರಿಸ್ಥಿತಿ ಈ ಹಾಡಿನಲ್ಲಿ ತಿಳಿಹಾಸ್ಯದೊಂದಿದೆ ವ್ಯಕ್ತವಾಗಿ ಜನಮೆಚ್ಚುಗೆ ಪಡೆಯುತ್ತಿದೆ. ಕಾರ್ತಿಕ್ ಶರ್ಮಾ ಕಂಪೋಸ್ ಮಾಡಿರೋ ಕ್ಯಾಚಿ ಟ್ಯೂನ್‍ಗೆ ರೋಹಿತ್ ರಮಣ್ ಅಷ್ಟೇ ಕ್ಯಾಚಿಯಾಗಿರೋ ಸಾಹಿತ್ಯವನ್ನ ಕಟ್ಟಿದ್ದಾರೆ. ಈ ಹಾಡು ಚಿತ್ರಪ್ರೇಮಿಗಳ ಹಾಗೂ ಶ್ವಾನಪ್ರೇಮಿಗಳ ಆಸಕ್ತಿಯನ್ನ ಮತ್ತಷ್ಟು ಹೆಚ್ಚಿಸುತ್ತಿದೆ.

Comments

Leave a Reply

Your email address will not be published. Required fields are marked *