11 ಕೆಜಿ ತೂಕದ ಚಿನ್ನದ ಶಿವನ ಮುಖವಾಡ ಹಸ್ತಾಂತರ

ಮೈಸೂರು: ಸೋಮವಾರ ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆಯ ತ್ರಿನೇಶ್ವರ ದೇವಾಲಯಕ್ಕೆ ಚಿನ್ನದ ಶಿವನ ಮುಖವಾಡವನ್ನು ಶನಿವಾರ ಹಸ್ತಾಂತರಿಸಲಾಗಿದೆ.

ಮುಜರಾಯಿ ಇಲಾಖೆ ಅಧಿಕಾರಿಗಳು ಶಿವ ಮುಖವುಳ್ಳ ಚಿನ್ನದ ಕೊಳಗವನ್ನ ದೇವಾಯಲಕ್ಕೆ ಹಸ್ತಾಂತರಿಸಿದ್ದಾರೆ. ಈ ಶಿವನ ಮುಖವಾಡ ಬರೋಬ್ಬರಿ 11 ಕೆ.ಜಿ ತೂಕವಿದೆ. ಈ ತ್ರಿನೇಶ್ವರ ದೇವಾಲಯ ಮೈಸೂರು ಅರಮನೆ ಒಳ ಆವರಣದಲ್ಲಿ ಇದೆ. ಶಿವನ ಮುಖವಾಡವನ್ನು ಶಿವರಾತ್ರಿ ದಿನ ತ್ರಿನೇಶ್ವರ ಲಿಂಗದ ಮೇಲೆ ಇಟ್ಟು ಮಾಡಿ ಪೂಜೆ ಸಲ್ಲಿಸಲಾಗುತ್ತದೆ.

ಮುಜರಾಯಿ ಇಲಾಖೆ ಶಿವರಾತ್ರಿ ಇಡೀ ದಿನ ಭಕ್ತರಿಗೆ ತ್ರಿನೇಶ್ವರ ಲಿಂಗದ ದರ್ಶನದ ಮಾಡಲು ಅವಕಾಶ ಮಾಡಿಕೊಡಲಿದೆ. ಶಿವರಾತ್ರಿ ದಿನ ಅನೇಕ ಭಕ್ತರು ಜಾಗರಣೆ ಮಾಡುತ್ತಾರೆ. ಹೀಗಾಗಿ ಅಂದಿನ ದಿನ ಶಿವನ ದೇವಾಲಯಗಳು ರಾತ್ರಿಯಿಡೀ ತೆರೆದಿರುತ್ತದೆ. ಅದೇ ರೀತಿ ತ್ರಿನೇಶ್ವರ ದೇವಾಲಯಲೂ ತೆರೆದಿರುತ್ತದೆ. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಚಿನ್ನದ ಮುಖವಾಡವುಳ್ಳ ಶಿವನನ್ನು ನೋಡಲು ಮುಜರಾಯಿ ಇಲಾಖೆ ಅವಕಾಶ ಮಾಡಿಕೊಟ್ಟಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *