ಕಾರ್ಯಕ್ರಮದಲ್ಲಿ ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ

ಬೆಂಗಳೂರು: ಅಪ್ಪು ಅವರನ್ನು ನೆನೆದು ಶಿವಣ್ಣ ಮತ್ತೆ ಕಣ್ಣೀರು ಹಾಕಿದ್ದಾರೆ. ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಆಯೋಜಿಸಿರುವ ಪುನೀತ್ ರಾಜ್‍ಕುಮಾರ್ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಶಿವಣ್ಣ ಪ್ರೀತಿಯ ತಮ್ಮನನ್ನು ನೆನೆದು ಕಣ್ಣೀರು ಹಾಕಿದರು.

ಬೆಂಗಳೂರಿನ ಶೇಷಾದ್ರಿಪುರಂ ಈಡಿಗರ ಸಂಘದ ಆವರಣದಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಪುನೀತ್ ಅವರ ಚಿತ್ರದ ಕೆಲ ಹಾಡುಗಳನ್ನು ಹಾಡಲಾಯಿತು ಈ ವೇಳೆ ಶಿವಣ್ಣ ತಮ್ಮ ಅಪ್ಪುವನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತರು. ಬಳಿಕ ಕಾರ್ಯಕ್ರಮದ ಆಯೋಜಕರು ಶಿವಣ್ಣ ಬಳಿ ಬಂದು ಸಮಾಧಾನಪಡಿಸಿದರು. ಇದನ್ನೂ ಓದಿ: ಅಪ್ಪು ಕನಸಿನ ಯೋಜನೆ, ವನ್ಯಜೀವಿ ಆಧಾರಿತ ಚಿತ್ರ ‘ಗಂಧದ ಗುಡಿ’ಯ ಟೀಸರ್ ಡಿಸೆಂಬರ್ 6ಕ್ಕೆ ರಿಲೀಸ್

ಅಪ್ಪುವೊಂದಿಗೆ ತುಂಬಾ ಅನ್ಯೂನ್ಯತೆಯಿಂದ ಇದ್ದ ಶಿವಣ್ಣ ಪ್ರತಿಯೊಂದು ಕಾರ್ಯಕ್ರಮಕ್ಕೆ ತೆರಳುವಾಗಲು ಜೊತೆಗೆ ಹೋಗುತ್ತಿದ್ದರು. ಇದೀಗ ಅಪ್ಪು ಜೊತೆಗಿಲ್ಲದಿರುವುದನ್ನು ಶಿವಣ್ಣನಿಗೆ ಮರೆಯಲಾಗುತ್ತಿಲ್ಲ. ಕಾರ್ಯಕ್ರಮದಲ್ಲಿ ನಟಿ ಜಯಾಮಾಲ ಸಹಿತ ಹಲವು ಕಲಾವಿದರು ಭಾಗಿಯಾಗಿದ್ದರು. ಇದನ್ನೂ ಓದಿ: ಕಾಫಿನಾಡಲ್ಲಿ ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ಅಪ್ಪು ಕಪ್ ಕ್ರಿಕೆಟ್ ಪಂದ್ಯಾವಳಿ

Comments

Leave a Reply

Your email address will not be published. Required fields are marked *