ಜ.1ಕ್ಕೆ ಶಿವರಾಜ್ ಕುಮಾರ್ ಹೊಸ ಸಿನಿಮಾ ಘೋಷಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivaraj Kumar) ಅವರ ಹೊಸ ಸಿನಿಮಾ (New Movie) ಇದೇ ಜನವರಿ 1ರಂದು ಘೋಷಣೆ ಆಗುವ ಸಾಧ್ಯತೆ ಇದೆ. ಈಗಾಗಲೇ ಶಿವರಾಜ್ ಕುಮಾರ್ ಎರಡು ಸಿನಿಮಾಗಳ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಈ ಎರಡೂ ಚಿತ್ರಗಳ ಜೊತೆ ಈ ಹೊಸ ಸಿನಿಮಾದಲ್ಲೂ ಅವರು ನಟಿಸಲಿದ್ದಾರಂತೆ.

ಶಿವರಾಜ್ ಕುಮಾರ್ ಮತ್ತು ಓಂ ಪ್ರಕಾಶ್ ರಾವ್ (Om Prakash Rao) ಅಂದಾಕ್ಷಣ ಥಟ್ಟನೆ ನೆನಪಾಗುವ ಸಿನಿಮಾ ಎಕೆ 47. ಈ ಸಿನಿಮಾದ ಜೋಡಿಯೇ ಹೊಸ ಸಿನಿಮಾದಲ್ಲಿ ಮುಂದುವರೆಯಲಿದೆಯಂತೆ. ಈ ಹೊಸ ಸಿನಿಮಾಗೆ ಓಂ ಪ್ರಕಾಶ್ ರಾವ್ ನಿರ್ದೇಶಕರು ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.

ಘೋಸ್ಟ್ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ಶಿವರಾಜ್ ಕುಮಾರ್, ಸದ್ಯ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಒಂದು ಚಿತ್ರಕ್ಕೆ ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿದ್ದರೆ ಮತ್ತೊಂದು ಸಿನಿಮಾಗೆ ನರ್ತನ್ ನಿರ್ದೇಶಕರು. ಈ ಎರಡೂ ಸಿನಿಮಾಗಳ ಶೂಟಿಂಗ್ ನಂತರ ಪುತ್ರಿ ನಿವೇದಿತಾ ಅವರ ನಿರ್ಮಾಣದ ಚಿತ್ರದಲ್ಲಿ ಶಿವರಾಜ್ ಕುಮಾರ್ ಅತಿಥಿ ಪಾತ್ರ ಮಾಡಲಿದ್ದಾರೆ.