ಶಿವರಾಜ್ ಕೆ. ಆರ್ ಪೇಟೆ ಬೆಸ್ಟ್ ಫ್ರೆಂಡ್ ಗುಂಡ ಅಂತೆ!

ನಾನು ಮತ್ತು ಗುಂಡ ಸ್ಯಾಂಡಲ್‍ವುಡ್ ಅಂಗಳದಲ್ಲಿ ತುಂಬಾ ವರ್ಷಗಳ ನಂತ್ರ ತಯಾರಾಗಿರೋ ಸಾಕುಪ್ರಾಣಿ ಸಂಬಂಧವನ್ನ ಸಾರುವ ಸಂಪೂರ್ಣ ಸಿನಿಮಾವೊಂದು ಸಿದ್ಧವಾಗಿದೆ. ಫಸ್ಟ್ ಲುಕ್, ಟೀಸರ್ ನಿಂದ ಸಾಕಷ್ಟು ಸದ್ದು ಮಾಡಿದ್ದ ಸಿನಿಮಾ ಕೂಡ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ. ಆರ್ ಪೇಟೆ ನಾಯಕನಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ನಾನು ಮತ್ತು ಗುಂಡ ಚಿತ್ರ ರಿಲೀಸ್‍ಗೆ ರೆಡಿಯಾಗಿದ್ದು, ಇತ್ತೀಚೆಗಷ್ಟೇ ಸೆನ್ಸಾರ್ ಪರೀಕ್ಷೆಯನ್ನೂ ಮುಗಿಸಿದ್ದಾನೆ. ಚಿತ್ರವನ್ನು ನೋಡಿ ಸೆನ್ಸಾರ್ ಮಂಡಳಿ ಮೆಚ್ಚಿಕೊಂಡಿದ್ದು ಆಗಿದೆ. ಸದಭಿರುಚಿಯ ಚಿತ್ರಗಳನ್ನ, ಅದ್ರಲ್ಲೂ ಅಪರೂಪದ ಪ್ರಯೋಗಗಳನ್ನ ಸದಾ ಬೆಂಬಲಿಸೋ, ಮತ್ತು ಅಂತಹ ಸಿನಿಮಾಗಳನ್ನ ವಿತರಿಸಿ ಸೈ ಎನ್ನಿಸಿಕೊಂಡಿರುವಂತ ಮೈಸೂರು ಟಾಕೀಸ್ ನ ಜಾಕ್ ಮಂಜು ಅವರೇ ಈ ಸಿನಿಮಾವನ್ನು ವಿತರಣೆ ಮಾಡುತ್ತಿದ್ದಾರೆ. ‘ನಾನು ಮತ್ತು ಗುಂಡ’ ಚಿತ್ರವನ್ನ ನೋಡಿ ಮೆಚ್ಚಿಕೊಂಡಿದ್ದು, ಚಿತ್ರವನ್ನ ವಿತರಣೆ ಮಾಡೋದಕ್ಕೆ ಮುಂದಾಗಿದ್ದಾರೆ.

ಅಂದಹಾಗೇ ನಾನು ಮತ್ತು ಗುಂಡ ಚಿತ್ರತಂಡ ಈ ಮೂಲಕ ಪ್ರಚಾರ ಕಾರ್ಯವನ್ನ ಶುರುಮಾಡಿದ್ದು, ಸದ್ಯದಲ್ಲೇ ಚಿತ್ರದ ಇನ್ನಷ್ಟು ವಿಶೇಷತೆಗಳನ್ನು ಹಂಚಿಕೊಳ್ಳಲಿದೆ. ಇದೇ 24 ರಂದು ತೆರೆ ಮೇಲೆ ನಾನು ಮತ್ತು ಗುಂಡನನ್ನು ಕರೆತರಲಿದ್ದಾರೆ. ಹಾಗೆಯೇ ಶಿವರಾಜ್ ಕೆ.ಆರ್ ಪೇಟೆಯ ಅಭಿನಯ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಶಿವರಾಜ್ ಕೆ.ಆರ್.ಪೇಟೆ ಇತ್ತೀಚಿನ ಹಾಸ್ಯ ನಟರಲ್ಲಿ ಒಬ್ಬರು. ಅವರ ಸಿನಿಮಾ ಎಂದಾಕ್ಷಣಾ ಮನಸಾರೆ ನಕ್ಕು, ಟೆನ್ಷನ್ ಫ್ರಿ ಆಗುತ್ತೆ ಅನ್ನೋ ನಿರೀಕ್ಷೆ ಎಲ್ಲರಲ್ಲೂ ಇದ್ದೆ ಇದೆ. ಹಾಗೆಯರೆ ಈ ಸಿನಿಮಾದಲ್ಲಿ ಸಿಂಬಾ ಎಂಬ ನಾಯಿಯೂ ಪಾತ್ರ ಮಾಡುತ್ತಿದ್ದು, ಮತ್ತಷ್ಟು ಕಾಮಿಡಿಯನ್ನು ಸಹಜವಾಗಿಯೇ ನಿರೀಕ್ಷಿಸುತ್ತಿದ್ದಾರೆ.

ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದಲ್ಲಿ, ಪೊಯಂ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ಗಾಂಧಿಗಿರಿ ನಿರ್ದೇಶಕ ರಘು ಹಾಸನ್ ನಿರ್ಮಿಸಿರೋ ಸಿನಿಮಾ. ಶರತ್ ಚಕ್ರವರ್ತಿ ಸಂಭಾಷಣೆ ಬರೆದಿರೋ ಈ ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ.

Comments

Leave a Reply

Your email address will not be published. Required fields are marked *