ಕನ್ನಡದ ನಟಿಯೊಬ್ಬಳು ಮಂಚಕ್ಕೆ ಕರೆದಳು ಎಂದ ನಿರ್ದೇಶಕನಿಗೆ ಶಿವಣ್ಣ ಮಾತಿನ ಪಂಚ್

ವಾರದ ಹಿಂದೆಯಷ್ಟೇ ಟಾಲಿವುಡ್ ನಿರ್ದೇಶಕ ಕಂ ನಿರ್ಮಾಪಕ ಗೀತಕೃಷ್ಣ ತನ್ನ ನಾಲಿಗೆ ಹರಿಬಿಟ್ಟು, ವಿವಾದ ಸೃಷ್ಟಿ ಮಾಡಿಕೊಂಡಿದ್ದ. ಯೂಟ್ಯೂಬ್ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿದ್ದ ಈ ಆಸಾಮಿ ‘ಕನ್ನಡದಲ್ಲಿ ಸಿನಿಮಾ ಮಾಡಲು ಹೋಗಿದ್ದೆ. ಅಲ್ಲಿನ ಖ್ಯಾತ ನಟಿಯೊಬ್ಬಳು ನನ್ನನ್ನೇ ಮಂಚಕ್ಕೆ ಕರೆದುಬಿಟ್ಟಳು. ಲೈಂಗಿಕ ಕಿರುಕುಳ ಹೆಣ್ಣು ಮಕ್ಕಳ ಮೇಲೆ ಆಗುತ್ತದೆ ಎಂದು ಕೇಳಿದ್ದೀರಿ. ಕನ್ನಡದಲ್ಲಿ ಗಂಡ ಮಕ್ಕಳ ಮೇಲೆ ಹೀಗೆ ಆಗುತ್ತಿದೆ ಎಂದು ಸ್ವತಃ ಅನುಭವಿಸಿದೆ’ ಎಂದು ಹೇಳುವ ಮೂಲಕ ವಿವಾದ ಸೃಷ್ಟಿ ಮಾಡಿದ್ದರು.

ಗೀತಕೃಷ್ಣ ಮಾತು ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ಅಂಗಳದಲ್ಲಿ ಬಿರುಗಾಳಿಯನ್ನೇ ಸೃಷ್ಟಿ ಮಾಡಿತ್ತು. ಪದೇ ಪದೇ ತಮಿಳು ಮತ್ತು ತೆಲುಗು ನಟರು ಕನ್ನಡ ಸಿನಿಮಾ ರಂಗದ ಮೇಲೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಗೀತಕೃಷ್ಣ ಉಲ್ಟಾ ಹೊಡೆದಿದ್ದಾರೆ. ಮತ್ತು ತಾವು ಆ ರೀತಿಯಲ್ಲಿ ಮಾತೇ ಆಡಿಲ್ಲವೆಂದು, ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ : ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

ಈ ಕುರಿತು ಸ್ಯಾಂಡಲ್ ವುಡ್ ಖ್ಯಾತ ನಟ ಶಿವರಾಜ್ ಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಿರಸಿಯಲ್ಲಿ ಮಾತನಾಡಿರುವ ಅವರು’ ಯಾರದೋ ಹೇಳಿಕೆಗೆ ಪ್ರತಿಕ್ರಿಯೆ ಕೊಡುವುದ ಸರಿಯಲ್ಲ. ಕನ್ನಡ ಸಿನಿಮಾ ರಂಗ ಏನು ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ. ಯಾರೋ ಏನೋ ಅಂದರು ಅಂತ ರಿಯ್ಯಾಕ್ಟ್ ಮಾಡಿದರೆ, ಅದರಿಂದ ಅವರಿಗೆ ಲಾಭ. ಹಾಗಾಗಿ ಅಂತವರನ್ನು ನಾವು ಅವೈಡ್ ಮಾಡಬೇಕು’ ಎಂದಿದ್ದಾರೆ.

ಇದನ್ನೂ ಓದಿ : ತಮಿಳು ಖ್ಯಾತ ನಟ ಸಿಂಬು ಮನೆಮುಂದೆ ಹೈಡ್ರಾಮಾ, ಸೀರಿಯಲ್ ನಟಿ ಧರಣಿ

ಅಪ್ಪಾಜಿ ಡಾ.ರಾಜ್ ಕುಮಾರ್ ಅವರಿಂದ ಹಿಡಿದು ಅನೇಕ ಮಹಿನಿಯರು ಸಿನಿಮಾ ಉದ್ಯಮವನ್ನು ಕಟ್ಟಿದ್ದಾರೆ. ಇಂದು ವಿಶ್ವ ಮೆಚ್ಚುವಂತಹ ಚಿತ್ರಗಳು ನಮ್ಮಲ್ಲಿ ತಯಾರಾಗುತ್ತಿವೆ. ಕನ್ನಡ ಸಿನಿಮಾ ರಂಗದ ಬಗ್ಗೆ ಯಾರೇ ಮಾತಾಡಿದರೂ, ಅದು ಅವರಿಗೆ ಶೋಭ ತರುವಂಥದ್ದು ಅಲ್ಲ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *