ದುಬೈನಿಂದ ವಾಟ್ಸಪ್‍ನಲ್ಲೇ ಶಿವಮೊಗ್ಗದಲ್ಲಿರುವ ಪತ್ನಿಗೆ ತಲಾಖ್

ಶಿವಮೊಗ್ಗ: ತ್ರಿವಳಿ ತಲಾಖ್ ವಿರುದ್ಧ ಕೇಂದ್ರ ಸರ್ಕಾರ ಕಾನೂನು ಜಾರಿಗೆ ತಂದಿದ್ದರೂ ದುಬೈನಿಂದ ಪತಿ ಮಹಾಶಯನೊಬ್ಬ ವಾಟ್ಸಾಪ್ ಮೂಲಕ ಪತ್ನಿಗೆ ತಲಾಖ್ ನೀಡಿದ್ದಾನೆ.

ನಗರದ ಟ್ಯಾಂಕ್ ಮೊಹಲ್ಲಾ ನಿವಾಸಿ ಮುಸ್ತಫಾ ಬೇಗ್ ಪತ್ನಿಗೆ ತಲಾಖ್ ನೀಡಿದ ಪತಿ. ಮುಸ್ತಫಾ ಬೇಗ್ ಅದೇ ಬಡಾವಣೆಯ ಆಯಿಷಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದ. ಬಳಿಕ ಕೆಲಸಕ್ಕಾಗಿ ದುಬೈಗೆ ತೆರಳಿದ್ದ. ವರ್ಷಕ್ಕೆ ಎರಡು ಬಾರಿ ಮನೆಗೆ ಬಂದು, ಪತ್ನಿ ಹಾಗೂ ಮಗಳ ಜೊತೆಗೆ ಕಾಲ ಕಳೆಯುತ್ತಿದ್ದ. ಇದನ್ನೂ ಓದಿ: ಮೋದಿ ರ‍್ಯಾಲಿಯಲ್ಲಿ ಭಾಗವಹಿಸಿದ್ದಕ್ಕೆ ಪತ್ನಿಗೆ ತಲಾಕ್ ನೀಡಿದ ಪತಿ!

ಮುಸ್ತಫಾ ಬೇಗ್ ತನ್ನ ವೇತನದಲ್ಲಿ ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು 13 ಸಾವಿರ ರೂ. ನೀಡುತ್ತಿದ್ದ. 20 ವರ್ಷಗಳ ಕಾಲ ಆಯಿಷಾ ಜೊತೆಗೆ ಸಂಸಾರ ನಡೆಸಿದ್ದ ಮುಸ್ತಫಾ ಬೇಗ್ ಈಗ ವಾಟ್ಸಪ್ ಮೂಲಕ ತಲಾಖ್ ನೀಡಿದ್ದಾನೆ. ಆದರೆ ಪತ್ನಿ ಆಯಿಷಾ ಅವರು ಮಾತ್ರ ನನಗೆ ತಲಾಖ್ ಬೇಡ, ಪತಿಯೇ ಬೇಕು. ನಾನು ಆತನ ಜೊತೆಗೆ ಸಂಸಾರ ನಡೆಸಬೇಕು ನನಗೆ ನ್ಯಾಯ ಕೊಡಿಸಿ ಎಂದು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.  ಇದನ್ನೂ ಓದಿ: ಅತ್ತೆಯ 2ನೇ ಪತಿಯೊಂದಿಗೆ ಸೆಕ್ಸ್ ಗೆ ಒತ್ತಾಯಿಸಿದ್ರು – ವಾಟ್ಸಪ್‍ನಲ್ಲಿ ತ್ರಿವಳಿ ತಲಾಕ್ ಪಡೆದ ಮಹಿಳೆ ಹೇಳಿಕೆ

ಮೊದಲು ದೂರು ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದರು. ಆದರೆ ಆಯಿಷಾ ಒತ್ತಾಯಕ್ಕೆ ದೂರು ದಾಖಲಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬುಧವಾರ ಅಧಿಕೃತವಾಗಿ ಮುಸ್ತಫಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *