ಶಿವಮೊಗ್ಗ | ಅಕ್ರಮವಾಗಿ ಚಿರತೆಯ ಹಲ್ಲು, ಉಗುರು ಸಾಗಾಟಕ್ಕೆ ಯತ್ನ – ಆರೋಪಿ ಅರೆಸ್ಟ್

ಶಿವಮೊಗ್ಗ: ಚಿರತೆ (Leopard) ಉಗುರು ಹಾಗೂ ಹಲ್ಲುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಯನ್ನು ಸಾಗರದ (Sagar) ಅರಣ್ಯ ಸಂಚಾರಿ ದಳ ಬಂಧಿಸಿದೆ.

ಬಂಧಿತ ಆರೋಪಿಯನ್ನು ಲೋಕೇಶ್ ಎಂದು ಗುರುತಿಸಲಾಗಿದೆ. ಪೊಲೀಸರ (Police) ಕಾರ್ಯಾಚರಣೆ ವೇಳೆ ಆತನ ಬಳಿ ಚಿರತೆಯ ಉಗುರು ಮತ್ತು ಹಲ್ಲುಗಳು ಪತ್ತೆಯಾಗಿವೆ. ಮಾಲು ಸಮೇತ ಆತನನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಯಿಂದ 16 ಚಿರತೆ ಉಗುರು ಮತ್ತು 3 ಚಿರತೆ ಹಲ್ಲುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.