ಶಿವಮೊಗ್ಗ: ಲವ್ ಮಾಡಿ ಮದುವೆಯಾಗಿ ನಂತರ ಮಾವನಿಂದಲೇ ಹಲ್ಲೆಗೆ ಒಳಗಾಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಅಳಿಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕೋಮಾಕ್ಕೆ ಜಾರಿದ್ದ ರಜತ್ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ.
ಏನಿದು ಪ್ರಕರಣ?
ಟೆಕ್ಕಿ ಜೋಡಿ ಶಿವಮೊಗ್ಗದ ರಜತ್ ಹಾಗೂ ಶ್ವೇತಾ ವಾಲಿ 6 ವರ್ಷಗಳ ಕಾಲ ಪರಸ್ಪರ ಪ್ರೀತಿಸಿ, ಮನೆಯವರನ್ನ ಒಪ್ಪಿಸಿ ಫೆಬ್ರವರಿಯಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಆದರೆ ದಂಪತಿ ನಡುವೆ ಅದೇನಾಯಿತೋ ಗೊತ್ತಿಲ್ಲ. ಆರೇ ತಿಂಗಳಲ್ಲಿ ಶ್ವೇತಾ, ಶಾಶ್ವತವಾಗಿ ತವರು ಮನೆ ಸೇರಿದ್ದಳು.
ಮಗಳು ತವರು ಮನೆಗೆ ಸೇರಿದ ಹಿನ್ನೆಲೆ ದಂಪತಿಯನ್ನು ಒಂದು ಮಾಡಲು ಶ್ವೇತಾ ತಂದೆ, ವೀರಶೈವ ಸಮಾಜದ ಪ್ರಭಾವಿ ಮುಖಂಡ ಅನಂದ ವಾಲಿ ಅಳಿಯನ ಮನೆಗೆ ಹೋಗಿದ್ದರು. ಈ ವೇಳೆ ಇವರಿಬ್ಬರು ಹಲ್ಲೆ ಮಾಡಿದ ಪರಿಣಾಮ ರಜತ್ ಕೋಮಾ ಸ್ಥಿತಿಗೆ ತಲುಪಿದ್ದರು. ರಜತ್‍ಗೆ ಬ್ರೈನ್ ಡೆಡ್ ಆಗಿದೆ ಎಂದು ವೈದ್ಯರು ಈ ಮೊದಲು ತಿಳಿಸಿದ್ದರು.
ಸದ್ಯ ಕೊಲೆ ಯತ್ನ ಕೇಸ್‍ನಲ್ಲಿ ಕಾಂಗ್ರೆಸ್ ಮುಖಂಡರಾಗಿರುವ ಆನಂದ ವಾಲಿ ಹಾಗೂ ಪುತ್ರ ಸಂದೀಪ್ ವಾಲಿ ಜೈಲು ಪಾಲಾಗಿದ್ದಾರೆ. ನಾಪತ್ತೆಯಾಗಿರುವ ಮಗಳು ಶ್ವೇತಾ ಹಾಗೂ ಪತ್ನಿ ಜಯಂತಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.












Leave a Reply