ನನ್ನ ಮಗನನ್ನು ಕಂಡರೆ ಮುಸ್ಲಿಮರಿಗೆ ಆಗುತ್ತಿರಲಿಲ್ಲ- ಹರ್ಷ ತಾಯಿಯಿಂದ ಎಫ್‍ಐಆರ್

ಶಿವಮೊಗ್ಗ: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತ ಹರ್ಷ ತಾಯಿ ಪದ್ಮಾ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ

ನನ್ನ ಮಗನಿಗೆ ಆಲಿಫ್, ಪಠಾಣ್ ಸಹಚರರಿಂದ ಬೆದರಿಕೆ ಇತ್ತು. ಕೊಲೆ ಮಾಡ್ತೇವೆ ಅಂತಾ ಆಗಾಗ ಹೇಳ್ತಾ ಇದ್ದರು. ನನ್ನ ಮಗನನ್ನು ಮುಸ್ಲಿಮರಿಗೆ ಕಂಡರೆ ಆಗುತ್ತಿರಲಿಲ್ಲ. ಆಗ ನಾನು ಯಾರ ತಂಟೆಗೂ ಹೋಗಬೇಡ, ನಿನ್ನಷ್ಟಕ್ಕೆ ನೀನಿರು ಎಂದಿದ್ದೆ. ನನ್ನ ಪಾಡಿಗೆ ಇರುತ್ತೇನೆಂದು ಮಾತು ಕೊಟ್ಟಿದ್ದ ಎಂದು ಹೇಳುತ್ತಾ ಮಗನ ನೆನೆದು ಕಣ್ಣೀರು ಹಾಕಿದರು.

ನಿನ್ನೆ ರಾತ್ರಿ ಕ್ಯಾಂಟೀನ್ ಬಳಿ ಟೀ ಕುಡಿಯುತ್ತಾ ನಿಂತಿದ್ದ ವೇಳೆ ಕಾರಿನಲ್ಲಿ ಬಂದ ಯುವಕರ ಗುಂಪು ಏಕಾಏಕಿ ಹರ್ಷನ ಮೇಲೆ ದಾಳಿ ನಡೆಸಿದೆ. ನಂತರ ದಾಳಿ ನಡೆಸಿದ ತಂಡ ಸ್ಥಳದಿಂದ ಪರಾರಿಯಾಗಿದೆ. ಈ ವೇಳೆ ದಾಳಿಗೆ ಒಳಗಾದ ಹರ್ಷ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಹರ್ಷ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸದ್ಯ ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.  ಇದನ್ನೂ ಓದಿ: ಹರ್ಷ ಕುಟುಂಬಕ್ಕೆ 1 ಲಕ್ಷ ರೂ. ನೆರವು ಘೋಷಿಸಿದ ಶಾಸಕ ಅರವಿಂದ ಲಿಂಬಾವಳಿ

ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ. ಅರೆಸ್ಟ್ ಆಗಿರುವ ಮೂರು ಜನ, ಎಲ್ಲಿಯವರು ಅಂತಾ ಹೇಳಲ್ಲ. ಐದು ಜನ ಕೊಲೆ ಮಾಡಿದ್ದಾರೆ. ಇದರ ಹಿಂದೆ ಏನಾಗಿದೆ ಅಂತಾ ನೋಡಬೇಕು. ಶಿವಮೊಗ್ಗದಿಂದ ಸ್ಪ್ರೆಡ್ ಆಗೋಕೆ ಬಿಡಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹರ್ಷನ ಕೊಲೆ ಸಂಬಂಧ ಸಿಎಂ ಭೇಟಿ ಮಾಡಿದ ಮುತಾಲಿಕ್!

Comments

Leave a Reply

Your email address will not be published. Required fields are marked *