ಗೋವಾದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ : ಸಂಜಯ್ ರಾವುತ್

ನವದೆಹಲಿ: ಕೊರೊನಾ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈ ವಿಚಾರವಾಗಿ ಮಾತನಾಡಿದ ಶಿವಸೇನಾ ಸಂಸದ ಸಂಜಯ್ ರಾವುತ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಲ್ಲರಿಗೂ ಮಾದರಿಯಾಗಿರಬೇಕು ಎಂದು ಸೂಚನೆ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯ ಬಹಿರಂಗ ಪ್ರಚಾರ, ರೋಡ್ ಶೋಗಳನ್ನು ಜನವರಿ 15ರವರೆಗೆ ನಿರ್ಬಂಧಿಸಲಾಗಿದೆ. ಪ್ರಚಾರಕ್ಕೆ ನಿರ್ಬಂಧ ಹೇರಿರುವುದು ಎಲ್ಲರಿಗೂ ಅನ್ವಯಿಸಬೇಕು. ಇದಕ್ಕೆ ಮೋದಿ ಅವರು ಮಾದರಿಯಾಗಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಾಕ್ವೆಲಿನ್ ಕುತ್ತಿಗೆ ಮೇಲೆ ಲವ್ ಬೈಟ್ – ಫೋಟೋ ವೈರಲ್

ಉತ್ತರ ಪ್ರದೇಶ ಹಾಗೂ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಶಿವಸೇನಾ ಸ್ಪರ್ಧಿಸಲಿದೆ. ಗೋವಾದಲ್ಲಿ ಶಿವಸೇನಾ-ಎನ್‍ಸಿಪಿ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್ ಕೂಡ ನಮ್ಮ ಜೊತೆಗಿರಲು ನಾವು ಬಯಸುತ್ತೇವೆ. ಆದರೆ ಸೀಟು ಹಂಚಿಕೆ ಸಮಸ್ಯೆಯಿದೆ. ಗೋವಾದಲ್ಲಿ ಸ್ವಂತ ಬಲದಲ್ಲಿ ಗೆಲ್ಲಬಹುದು ಎಂದು ಕಾಂಗ್ರೆಸ್ ಭಾವಿಸಿದ್ದರೆ ಅವರಿಗೆ ನಮ್ಮ ಶುಭಕಾಮನೆಗಳು. ಗೋವಾದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲು ಬಯಸುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:  ಕುತ್ತಿಗೆ ಮೇಲೆ ಮೂಡಿರುವ ಲವ್ ಬೈಟ್ ಫೋಟೋ ಬಗ್ಗೆ ಜಾಕ್ವೆಲಿನ್ ಹೇಳಿದ್ದೇನು?

ಪಶ್ಚಿಮ ಬಂಗಾಳದ ಚುನಾವಣೆ ಸಮಯದಲ್ಲಿ ಕೋವಿಡ್ ಎರಡನೇ ಅಲೆ ಉತ್ತುಂಗದಲ್ಲಿತ್ತು. ಕೆಲವು ಪಕ್ಷಗಳ ನಾಯಕರು ವಿಶೇಷವಾಗಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ಹೇಗೆ ಪ್ರಚಾರ ನಡೆಸಿದ್ದಾರೆ ಎಂಬುದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಈ ಬಾರಿ ಪ್ರಧಾನಿ ಮಾದರಿ ಆಗಬೇಕು ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *