ಶಿರೂರು ಶ್ರೀ ಕೇಸ್ – ಉಡುಪಿ ವ್ಯಕ್ತಿ ವಶಕ್ಕೆ, ಆಪ್ತೆ ರಮ್ಯಾ ಶೆಟ್ಟಿ ಎಲ್ಲಿದ್ದಾಳೆ?

ಉಡುಪಿ: ಶಿರೂರು ಶ್ರೀ ಅನುಮಾನಾಸ್ಪದ ಸಾವಿನ ಪ್ರಕರಣದ ಕೇಳಿಬಂದಿದ್ದ ಶ್ರೀಗಳ ಆಪ್ತೆ ರಮ್ಯಾ ಶೆಟ್ಟಿ ಎಲ್ಲಿದ್ದಾಳೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಉಡುಪಿಯ ಕೊರಂಗ್ರಪಾಡಿಯ ಮನೆಯಲ್ಲಿ ವಾಸವಿದ್ದ ರಮ್ಯಾ ಶೆಟ್ಟಿ ನಾಪತ್ತೆ ಆಗಿದ್ದಾರೆ. ಮನೆಗೆ ಬೀಗ ಹಾಕಲಾಗಿದ್ದು, ಪೊಲೀಸ್ ವಶದಲ್ಲಿಯೂ ರಮ್ಯಾ ಇಲ್ಲ ಅಂತಾ ಐಜಿಪಿ ಮತ್ತು ಎಸ್.ಪಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ರಮ್ಯಾ ಶೆಟ್ಟಿ ಎಲ್ಲಿದ್ದಾಳೆ ಎನ್ನುವುದು ಇನ್ನೂ ನಿಗೂಢವಾಗಿದೆ.

ಇಕ್ಬಾಲ್ ಮನ್ಸೂರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಕ್ಬಾಲ್ ಉಡುಪಿಯ ಕಾಪು ಮಜೂರು ನಿವಾಸಿಯಾಗಿದ್ದು, ರಮ್ಯಾ ಶೆಟ್ಟಿಯ ಗೆಳೆಯ ಎನ್ನಲಾಗಿದೆ. ಇಬ್ಬರು ನಿಕಟ ಸಂಪರ್ಕ ಹೊಂದಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಇದನ್ನು ಓದಿ: ರಾಮ ವಿಠಲ ದೇವರಿಗೆ ಪೇಜಾವರಶ್ರೀ ನೃತ್ಯ ಸೇವೆ

ಮುಂಬೈನಲ್ಲಿ ರಮ್ಯಾಗೆ ಇಕ್ಬಾಲ್ ಮನ್ಸೂರ್ ಪರಿಚಯವಾಗಿದ್ದು, ಶಿರೂರು ಸ್ವಾಮೀಜಿ ಸಾವಿನ ನಂತರ ರಮ್ಯಾ ಇಕ್ಬಾಲ್ ಜೊತೆ ಓಡಿ ಹೋಗಲು ಯತ್ನಿಸಿದ್ದಳೇ ಎನ್ನುವ ಪ್ರಶ್ನೆ ಎದ್ದಿದೆ.

ಇಕ್ಬಾಲ್ ಸಂಬಂಧಿಕರು ರಮ್ಯಾಗೆ ಬುರ್ಕಾ ತೊಡಿಸಿ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ಅಳದಂಗಡಿಯಲ್ಲಿ ಆ ಗುಂಪು ಸಿಕ್ಕಿಹಾಕಿಕೊಂಡಿತ್ತು. ನಂತರ ಇಬ್ಬರನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *