ಶಿಲ್ಪಾ ಶೆಟ್ಟಿ ಧರಿಸಿರುವ ಗೌನ್ ಬೆಲೆ ಎಷ್ಟು ಗೊತ್ತಾ? ಲಕಲಕ ಹೊಳಿತಿದ್ದಾಳೆ ರವಿಮಾಮನ ಬೆಡಗಿ

ಮುಂಬೈ: ಯಾವುದೇ ಪಾರ್ಟಿ ಇರಲಿ, ಸಮಾರಂಭವೇ ಆಗಿರಲಿ ಲಕಲಕ ಅಂತ ಹೊಳಿತಾ ಇರ್ತಾರೆ ಬಾಲಿವುಡ್ ನ ಹಾಟ್ ಬೆಡಗಿ ಶಿಲ್ಪಾ ಶೆಟ್ಟಿ. ಟ್ರೆಂಡ್ ಗೆ ತಕ್ಕಂತೆ ಕಾಸ್ಟ್ಯೂಮ್ ರೆಡಿ ಮಾಡಿಕೊಳ್ಳುವುದು ಅವರ ಹವ್ಯಾಸಗಳಲ್ಲಿ ಒಂದು. ಹಾಗಾಗಿಯೇ ಶಿಲ್ಪಾ ಇದ್ದಾರೆ ಅಂದರೆ, ಅಲ್ಲಿರುವ ಅಷ್ಟೂ ಕ್ಯಾಮೆರಾಗಳು ಅವರನ್ನು ಫೋಕಸ್ ಮಾಡುತ್ತವೆ. ಈಗ ಅಂಥದ್ದೇ ಕಾರಣಕ್ಕಾಗಿ ಮತ್ತೆ ಶಿಲ್ಪು ನೋಡುಗರ ಕಣ್ಣು ಕುಕ್ಕಿಸಿದ್ದಾರೆ. 1.7 ಲಕ್ಷ ರೂ. ಸಿಲ್ವರ್ ಗೌನ್ ಧರಿಸಿ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಮಿಂಚಿದ್ದಾರೆ.

ಪಾರ್ಟಿ ಮತ್ತು ಈವೆಂಟ್‌ಗಳಿಗೆ ಸದಾ ಆಕರ್ಷಿಸುವಂತಹ ಡ್ರೆಸ್ ಧರಿಸುವ ಶಿಲ್ಪಾ ಇನ್ಸ್ಟಾದಲ್ಲಿ ಈಗೊಂದು ಹೊಸ ಪೋಸ್ಟ್ ಮಾಡಿದ್ದು, ಇದು ನಿಮ್ಮ ಜೀವನದ ಅತ್ಯುತ್ತಮ ದಿನದಂತೆ ಯಾವಾಗಲೂ ಬಟ್ಟೆಯನ್ನು ಧರಿಸಿ. ಕೆಲವೊಮ್ಮೆ ಅದು ನಿಜವಾಗಿರುತ್ತೆ ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಶಿಲ್ಪಾ ಸಿಲ್ವರ್ ಗೌನ್ ಧರಿಸಿ ಕ್ಯಾಮರಾಗೆ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ನಿಜ ಜೀವನದಲ್ಲಿಯೂ ಹೀರೋಯಿನ್ಆದ ಶ್ವೇತಾ ಶ್ರೀವಾತ್ಸವ್!

ಗೌನ್ನಲ್ಲಿ ಶಿಲ್ಪಾ ಲುಕ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಅಲ್ಲದೆ ಗೂಗಲ್ನಲ್ಲಿ ಈ ಗೌನ್ ಬೆಲೆ 1.7 ಲಕ್ಷ ರೂ. ಇದ್ದು, ಬೆಲೆ ನೋಡಿ ಶಾಕ್ ಆಗಿದ್ದಾರೆ.

ಶಿಲ್ಪಾ ವಾಡ್ರ್ರೋಬ್‌ನಲ್ಲಿ ಎಲ್ಲ ಈವೆಂಟ್ ಮತ್ತು ಪಾರ್ಟಿಗೆ ಮ್ಯಾಚ್ ಆಗುವಂತೆ ಬಟ್ಟೆಗಳನ್ನು ಕಲೆಕ್ಟ್ ಮಾಡುತ್ತಾರೆ. ಫಾರ್ಮಲ್ ಪ್ಯಾಂಟ್‌ಸುಟ್‌ಗಳು, ಲೇಯ್ಡ್ ಬ್ಯಾಕ್ ಡ್ರೆಸ್‌ಗಳಿಂದ ರೆಡ್ ಕಾರ್ಪೆಟ್-ರೆಡಿ ಗೌನ್‌ಗಳು, ಸೀರೆ ಹೀಗೆ ಎಲ್ಲ ರೀತಿಯ ಡ್ರೆಸ್ ಗಳ ಕಲೆಕ್ಷನ್ ಶಿಲ್ಪಾ ಮಾಡುತ್ತಿರುತ್ತಾರೆ. ಅಲ್ಲದೆ ಶಿಲ್ಪಾ ಅವರ ವಾಡ್ರ್ರೋಬ್ ಕಲೆಕ್ಷನ್, ಟ್ರೆಂಡ್ಗೆ ತಕ್ಕಂತೆ ಚೇಂಜ್ ಆಗುತ್ತಿರುತ್ತೆ.

Shilpa Shetty | Saree Advise | Ravichandran - Filmibeat

ಅಂದಹಾಗೆ ಶಿಲ್ಪಾ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ರವಿಚಂದ್ರನ್ ಜತೆಗಿನ ಅವರ ಕಾಂಬಿನೇಷನ್ ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ. ಇದನ್ನೂ ಓದಿ: ಸೈಬರ್ ಮೋಸದ ಜಾಲದಕ್ಕೆ ಸಿಕ್ಕಿ 1.48 ಲಕ್ಷ ಕಳೆದುಕೊಂಡ ನಟಿ!

Comments

Leave a Reply

Your email address will not be published. Required fields are marked *