ಕಾಲೇಜು ದಿನಗಳಲ್ಲಿ ಅಮೀರ್‌ ಮೇಲೆ ಕ್ರಷ್‌ ಆಗಿತ್ತು.. ಲವ್‌ ಲೆಟರ್‌ ಕೂಡ ಬರೆದಿದ್ದೆ: ಬಾಲಿವುಡ್‌ ನಟಿ

ಬಾಲಿವುಡ್‌ ನಟಿ ಶೆಫಾಲಿ ಶಾ ಅವರು ತಮ್ಮ ಕಾಲೇಜು ದಿನಗಳು, ಪ್ರೀತಿ, ಸಿನಿಮಾಗಳಲ್ಲಿನ ಅಭಿನಯದ ಕೆಲವು ಇಂಟರೆಸ್ಟಿಂಗ್‌ ವಿಷಯಗಳನ್ನು ಬಾಲಿವುಡ್‌ ಹಂಗಾಮದಲ್ಲಿ ಹಂಚಿಕೊಂಡಿದ್ದಾರೆ.

ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಅವರಿಗೆ ಅಮಿರ್‌ ಖಾನ್‌ ಮೇಲೆ ಕ್ರಷ್‌ ಆಗಿತ್ತು. ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ ಸುದೀರ್ಘ ಬರಹವಿದ್ದ ಪ್ರೇಮ ಪತ್ರವೊಂದನ್ನು ಅಮೀರ್‌ ಖಾನ್‌ಗೆ ಕಳುಹಿಸಿದ್ದರು. ಲವ್‌ ಲೆಟರ್‌ನೊಂದಿಗೆ ತನ್ನ ಫೋಟೊವೊಂದನ್ನು ಸಹ ಕಳುಹಿಸಿದ್ದರು. ಇದನ್ನೂ ಓದಿ: ಮಾಧುರಿ ದೀಕ್ಷಿತ್ ಇರೋದು ಮನೇಲಿ ಅಲ್ಲ, ಅರಮನೆಯಲ್ಲಿ: ಹೊಸ ಮನೆಗೆ ದೇವದಾಸ್ ಬೆಡಗಿ

1995ರಲ್ಲಿ ರಾಮ್‌ ಗೋಪಾಲ್‌ ವರ್ಮಾ ನಿರ್ದೇಶನದಲ್ಲಿ ತೆರೆ ಕಂಡಿದ್ದ ಅಮೀರ್‌ ಖಾನ್‌ ಅಭಿನಯದ ʼರಂಗೀಲಾʼ ಚಿತ್ರದಲ್ಲಿ ಶೆಫಾಲಿ ಶಾ ಅವರು ಮಾಲಾ ಮಲ್ಹೋತ್ರಾ ಪಾತ್ರದಲ್ಲಿ ಅಭಿನಯಿಸಿದ್ದರು. ಆ ಸಿನಿಮಾದ ಕೆಲವೇ ದೃಶ್ಯಗಳಲ್ಲಿ ಮಾತ್ರ ಇವರ ಪಾತ್ರವಿದೆ. ಆದರೆ ಅಮೀರ್‌ ಅವರೊಂದಿಗೆ ಕಾಣಿಸಿಕೊಳ್ಳುವ ಯಾವುದೇ ದೃಶ್ಯ ಸಿನಿಮಾದಲ್ಲಿರಲಿಲ್ಲ.

ಬಾಲಿವುಡ್‌ ಹಂಗಾಮದಲ್ಲಿ ಮಾತನಾಡಿದ ಶೆಫಾಲಿ, ಅಮೀರ್‌ ಖಾನ್‌ ಅವರಿಗೆ ನಾನು ಪತ್ರ ಬರೆದಿದ್ದೆ. ಪ್ರೇಮ ಪತ್ರದೊಂದಿಗೆ ನನ್ನ ಫೋಟೋವನ್ನು ಕಳುಹಿಸಿದ್ದೆ. ಅದರಲ್ಲಿ ಭಾವನೆಗಳನ್ನು ವ್ಯಕ್ತಪಡಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಈ ವಾರ ಕರ್ನಾಟಕದಲ್ಲೇ 250ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ‘ಆರ್.ಆರ್.ಆರ್’: ಪುನೀತ್ ‘ಜೇಮ್ಸ್’ ಏನಾಗತ್ತೆ?

ಚಿತ್ರರಂಗಕ್ಕೆ ಬಂದಾಗಿನಿಂದ ಅಮೀರ್‌ ಖಾನ್‌ ಅವರೊಂದಿಗೆ ನೀವು ಸಿನಿಮಾ ಕೆಲಸ ಮಾಡಿದ್ದೀರಾ ಎಂಬ ಪ್ರಶ್ನೆಗೆ ಶೆಫಾಲಿ, ಇಲ್ಲ ಎಂದಿದ್ದಾರೆ. ಅಮೀರ್‌ ಅಭಿನಯದ ʼರಂಗೀಲಾʼ ಸಿನಿಮಾದಲ್ಲಿ ನಟಿಸಿದ್ದೇನೆ. ಆದರೆ ಅವರೊಟ್ಟಿಗೆ ತೆರೆಯಲ್ಲಿ ಕಾಣಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.

ನಿಮ್ಮ ಪ್ರೀತಿಯ ಬಗ್ಗೆ ಅಮೀರ್‌ ಖಾನ್‌ ಅವರಿಗೆ ಈಗೇನಾದರೂ ನೆನಪಿದೆಯಾ ಎಂಬ ಪ್ರಶ್ನೆಗೆ ಶೆಫಾಲಿ, ನನಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

ತನಿಖಾ ಥ್ರಿಲ್ಲರ್‌ ಸಿನಿಮಾ ʼಜಲ್ಸʼದಲ್ಲಿ ಶೆಫಾಲಿ ಶಾ ಮತ್ತು ವಿದ್ಯಾ ಬಾಲನ್‌ ಅಭಿನಯಿಸಿದ್ದಾರೆ. ಸುರೇಶ್‌ ತ್ರಿವೇಣಿ ನಿರ್ದೇಶನದ ಈ ಸಿನಿಮಾ ಮಾ.18ರಂದು ಅಮೇಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ.

Comments

Leave a Reply

Your email address will not be published. Required fields are marked *