ಮಂಡ್ಯ: ಕುರಿ ಸಾಧಾರಣವಾಗಿ ಒಂದು ಮರಿಗೆ ಅಥವಾ ಹೆಚ್ಚು ಅಂದರೆ ಎರಡು ಮರಿಗಳಿಗೆ ಜನ್ಮ ನೀಡುತ್ತದೆ. ಆದರೆ ಮಂಡ್ಯದ ರೈತರೊಬ್ಬರ ಮನೆಯಲ್ಲಿ ಕುರಿಯೊಂದು ಮೂರು ಮರಿಗಳಿಗೆ ಜನ್ಮ ನೀಡಿ ಸುದ್ದಿಯಾಗಿದೆ.
ಜಿಲ್ಲೆಯ ಮದ್ದೂರು ತಾಲೂಕಿನ, ತರಮನಕಟ್ಟೆ ಗ್ರಾಮದ ರೈತ ರಮೇಶ್ ಎಂಬವರ ಮನೆಯಲ್ಲಿ ಕುರಿಯೊಂದು ಮೂರು ಮರಿಗಳಿಗೆ ಜನ್ಮ ನೀಡಿದೆ. ರಮೇಶ್ ಮನೆಯವರು ಸುಮಾರು 50 ವರ್ಷಗಳಿಂದ ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ.

ರಮೇಶ್ ತಮ್ಮ ಮನೆಯಲ್ಲಿ ಸುಮಾರು 60 ಕುರಿಗಳನ್ನು ಸಾಕಿದ್ದಾರೆ. ಕಳೆದ ಐವತ್ತು ವರ್ಷಗಳಲ್ಲಿ ಅವರ ಕುರಿಗಳು ಒಮ್ಮೆಯೂ ಒಮ್ಮೆಲೆ ಮೂರು ಮರಿಗಳಿಗೆ ಜನ್ಮ ನೀಡಿಲ್ಲ. ಅಷ್ಟೇ ಅಲ್ಲದೇ ಸಹಜವಾಗಿ ಕುರಿಗಳು ಒಮ್ಮೆಗೆ ಒಂದು ಅಥವಾ ಎರಡು ಮರಿಗಳಿಗೆ ಜನ್ಮ ನೀಡುತ್ತವೆ.
ಇದೀಗ ಒಮ್ಮೆಗೆ ಮೂರು ಮರಿಗಳಿಗೆ ಜನ್ಮ ನೀಡಿರುವುದರಿಂದ ರೈತ ರಮೇಶ್ ಕುಟುಂಬ ಸಂತಸ ವ್ಯಕ್ತಪಡಿಸುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply