2014ರ ಅಲೆ ಈಗ ಸುನಾಮಿಯಾಗಿದ್ದು, ಕೊಚ್ಚಿ ಹೋಗಲಿದ್ದಾರೆ: ಮುಫ್ತಿಗೆ ಗಂಭೀರ್ ಟಾಂಗ್

ನವದೆಹಲಿ: ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರು ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಅವರನ್ನು ಟ್ವಿಟ್ಟರಿಲ್ಲಿ ಬ್ಲಾಕ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಗಂಭೀರ್, ಮೆಹಬೂಬಾ ಮುಫ್ತಿ ಅವರಿಗೆ ಟಾಂಗ್ ನೀಡಿದ್ದಾರೆ.

ಮಾಧ್ಯಮಗಳಿಗೆ ಈ ಕುರಿತು ಪ್ರತಿಕ್ರಿಯೆ ಮಾತನಾಡಿದ ಗಂಭೀರ್, ಅವರು ನನ್ನನ್ನು ಬ್ಲಾಕ್ ಮಾಡಿರಬಹುದು. ಆದರೆ ಹೀಗೆ ಮಾಡುತ್ತಾ ಹೋದ್ರೆ ದೇಶದ 130 ಕೋಟಿ ಜನರನ್ನು ಕೂಡ ಬ್ಲಾಕ್ ಮಾಡಬೇಕಾಗುತ್ತದೆ. 2014ದಲ್ಲಿ ದೇಶದಲ್ಲಿ ಒಂದು ಅಲೆ ಸೃಷ್ಟಿಯಾಗಿತ್ತು. ಈಗ ಅದು ಸುನಾಮಿಯಾಗಿ ಪರಿವರ್ತನೆಯಾಗಿದ್ದು ಅದರಲ್ಲಿ ಅವರು ಈಜದೇ ಇದ್ದರೆ ಕೊಚ್ಚಿ ಹೋಗಲಿದ್ದಾರೆ ಎಂದು ಹೇಳಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ ಸಂವಿಧಾನದ 370 ವಿಧಿ ಮತ್ತು 35 ಎ ಕಲಂಗಳ ಕುರಿತು ಇಬ್ಬರ ನಡುವೆ ಟ್ವಿಟ್ಟರ್ ನಲ್ಲಿ ಚರ್ಚೆ ನಡೆದಿತ್ತು. ಆ ಬಳಿಕ ಮುಫ್ತಿ ಅವರು ಗಂಭೀರ್ ಅವರನ್ನು ಟ್ವಿಟ್ಟರಿನಲ್ಲಿ ಬ್ಲಾಕ್ ಮಾಡಿದ್ದರು.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ಧತಿ ಕುರಿತು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಆದ ಬಳಿಕ ಮುಫ್ತಿ ಅವರು ಕಿಡಿಕಾರಿದ್ದರು. ಅಲ್ಲದೇ ಜಮ್ಮು ಕಾಶ್ಮೀರದ 370ನೇ ಕಲಂನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಟ್ವೀಟ್‍ಗೆ ಆಲಮ್ ಇಕ್ಬಾಲ್‍ರ ಕವಿತೆಯನ್ನು ಬರೆದುಕೊಂಡಿದ್ದರು.

ಇತ್ತ ಮುಫ್ತಿ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದ ಗಂಭೀರ್, ಭಾರತ ನಿಮ್ಮಂತೆ ಕಲೆಯಲ್ಲ, ಅದನ್ನು ಅಳಿಸಿಹಾಕಲು ಸಾಧ್ಯವಿಲ್ಲ ಎಂದಿದ್ದರು. ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದ ಮುಫ್ತಿ, ಗಂಭೀರ್ ರನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿ ನಿಮ್ಮ ರಾಜಕೀಯ ಇನ್ನಿಂಗ್ಸ್ ಕ್ರಿಕೆಟಿನಷ್ಟು ಗಟ್ಟಿಯಾಗಿಲ್ಲ ಎಂದಿದ್ದರು. ಆ ಬಳಿಕವೂ ಇಬ್ಬರ ನಡುವೆ ಪರಸ್ಪರ ಟೀಕೆಗಳು ವ್ಯಕ್ತವಾಗಿದ್ದವು. ಅಂತಿಮವಾಗಿ ಗಂಭೀರ್ ಅವರ ಟ್ವಿಟ್ಟರ್ ಖಾತೆಯನ್ನು ಬ್ಲಾಕ್ ಮಾಡುತ್ತಿರುವಾಗಿ ತಿಳಿಸಿದ ಮುಫ್ತಿ ಅವರು ತಮ್ಮನ್ನು ಟ್ರೋಲ್ ಮಾಡಲು ಸಲಹೆ ನೀಡಿದ್ದರು. ಈ ಕುರಿತಂತೆ ಪ್ರತಿಕ್ರಿಯೆ ನೀಡಿ ಗೌತಮ್ ಗಂಭೀರ್ ಟಾಂಗ್ ನೀಡಿದ್ದಾರೆ.

Comments

Leave a Reply

Your email address will not be published. Required fields are marked *