ರಸ್ತೆಯಲ್ಲಿ ಹೋಗುವ ಪುರುಷರನ್ನ ನೋಡಿ ನಗ್ತಾಳೆ-ನಂತ್ರ ಅಜ್ಞಾತ ಸ್ಥಳಕ್ಕೆ ಕರ್ಕೊಂಡು ಹೋಗ್ತಾಳೆ!

ಮೈಸೂರು: ರಸ್ತೆಯಲ್ಲಿ ಹೋಗುವ ಪುರುಷರನ್ನು ನೋಡಿ ನಗುತ್ತಾಳೆ. ಮುಂದೆ ಅವರನ್ನು ಪರಿಚಯ ಮಾಡಿಕೊಂಡು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿ ಹಣ ದೋಚುತ್ತಾಳೆ. ಇಲ್ಲಿಯವರೆಗೆ ದೋಚಿ ತನ್ನ ವ್ಯವಹಾರ ನಡೆಸುತ್ತಿದ್ದ ಖತರ್ನಾಕ್ ಯುವತಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾಳೆ.

ನಗರದ ಅಶೋಕಪುರಂ ನಿವಾಸಿ ಮಾಲಾ ಬಂಧಿತ ಆರೋಪಿ. ಮಾಲಾ ಮೈಸೂರಿನ ಜೆ.ಪಿ. ನಗರದ ವ್ಯಕ್ತಿಯೋರ್ವರನ್ನು ಪರಿಚಯ ಮಾಡಿಕೊಂಡು ಮಾಲ ವಂಚನೆ ಮಾಡಿದ್ದಳು. ವಂಚನೆಗೊಳಗಾದ ವ್ಯಕ್ತಿಯ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಮಾಲಾಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಹುಡುಗರೇ ಹುಷಾರ್!! ಈಕೆಯದ್ದು ಸರ್ಕಾರಿ ವೃತ್ತಿ, ಪ್ರೀತಿ ಹೆಸ್ರಲ್ಲಿ ಚೀಟ್ ಮಾಡೋದು ಪ್ರವೃತ್ತಿ!

ವ್ಯವಹಾರ ಹೀಗಿತ್ತು:
ಮಾಲಾ ದಾರಿಯಲ್ಲಿ ಹೋಗುವ ಯುವಕರನ್ನು ಪರಿಚಯ ಮಾಡಿಕೊಂಡು, ಮುಂದೆ ಮೊಬೈಲ್ ನಂಬರ್ ಕೇಳುತ್ತಾಳೆ. ಹೀಗೆ ಮೊಬೈಲ್ ನಂಬರ್ ಸಿಕ್ಕ ಕೂಡಲೇ ಅವರೊಂದಿಗೆ ಸಲುಗೆಯಿಂದೆ ವರ್ತಿಸಿ, ಆ ವ್ಯಕ್ತಿಯನ್ನು ಅಜ್ಞಾತ ಸ್ಥಳಕ್ಕೆ ಕರೆಸಿಕೊಂಡು ತನ್ನ ಕಡೆಯ ಯುವಕರಿಂದ ಹಲ್ಲೆ ನಡೆಸಿ ಖಾಲಿ ಚೆಕ್‍ಗೆ ಸಹಿ ಮಾಡಿಸಿಕೊಂಡು ವಂಚಿಸುತ್ತಿದ್ದಳು.

ಇದನ್ನೂ ಓದಿ: ಎಂಗೇಜ್‍ಮೆಂಟ್ ಆದ್ರೂ ತನ್ನ ಜೊತೆ ಎಂಗೇಜ್ ಆಗೆಂದ ಹುಡ್ಗ-ಮುಂದೆ ಏನ್ ಮಾಡ್ದಾ ಗೊತ್ತಾ? 

ಈ ಸಂಬಂಧ ಮಾಲಾಳಿಂದ ವಂಚನೆಗೊಳಗಾದ ವ್ಯಕ್ತಿಯೊಬ್ಬರು ಮೈಸೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಮಾಲಾಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾಲಾ ಇದೇ ರೀತಿ ಹಲವು ಯುವಕರಿಗೆ ಮೋಸ ಮಾಡಿದ್ದಾಳೆ ಎಂದು ಶಂಕಿಸಲಾಗಿದೆ. ಈಕೆಯಿಂದ ವಂಚನೆಗೊಳಗಾದವರು ಮರ್ಯಾದೆಗೆ ಅಂಜಿ ದೂರು ನೀಡಲು ಹಿಂದೇಟು ಹಾಕಿದ್ದರಿಂದ ಮಾಲಾ ಯಶಸ್ವಿಯಾಗಿ ತನ್ನ ಖತರ್ನಾಕ್ ಕೆಲಸವನ್ನು ಮುಂದುವರಿಸಿದ್ದಳು.

Comments

Leave a Reply

Your email address will not be published. Required fields are marked *