ರಷ್ಯಾ- ಉಕ್ರೇನ್ ಯುದ್ಧದಲ್ಲಿ ಭಾರತದ ನಿಲುವು ಹಗ್ಗದ ಮೇಲೆ ನೃತ್ಯ ಮಾಡಿದಂತಾಗಿದೆ: ಶಶಿ ತರೂರ್

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಬಗ್ಗೆ ಭಾರತ ನಿಲುವು ಬಿಗಿ ಹಗ್ಗದ ಮೇಲೆ ನೃತ್ಯ ಮಾಡುವಂತೆ ಆಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಂಭದಲ್ಲಿ ಭಾರತ ಏನನ್ನು ಹೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆದರೆ ಇತ್ತೀಚೆಗೆ ರಷ್ಯಾದ ವಿರುದ್ಧ ಧ್ವನಿ ಎತ್ತುತ್ತಿದೆ. ಉಕ್ರೇನ್‌ನಲ್ಲಿ 20,000ಕ್ಕೂ ಹೆಚ್ಚು ಭಾರತೀಯ ನಾಗರಿಕರು ಇರುವುದರಿಂದ ಭಾರತದ ಪರಿಸ್ಥಿತಿ ಅನಿಶ್ಚಿತವಾಗಿದೆ ಎಂದರು.

ಎಲ್ಲಾ ಭಾರತೀಯರನ್ನು ಯುದ್ಧ ಪ್ರದೇಶದಿಂದ ರಕ್ಷಿಸಲಾಗಿರುವುದರಿಂದ ಭಾರತವು ಈಗತನ್ನ ಹೆಜ್ಜೆಯನ್ನು ನಿರ್ಣಯಿಸಬಹುದು ಎಂದ ಅವರು, ಭಾರತದ ಸ್ಥಾನವನ್ನು ವಿಶ್ವವು ಸರಿಯಾದ ದೃಷ್ಟಿಯಲ್ಲಿ ನೋಡಿದೆ. ಅದನ್ನು ಖಚಿತ ಪಡಿಸಲು ಭಾರತೀಯ ರಾಜತಾಂತ್ರಿಕತೆ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇರಲ್ಲ: ಮಾಜಿ ಶಾಸಕ ರಾಜಣ್ಣ

ನಾವು ಕ್ವಾಡ್‌ನ ಸದಸ್ಯರಾಗಿದ್ದೇವೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದಾಗ ಭಾರತದ ನಾಗರಿಕರು ಅಲ್ಲಿ ಸಿಲುಕಿದ್ದರು. ಈ ಎಲ್ಲಾ ಕಾರಣದಿಂದಾಗಿ ಭಾರತವು ರಷ್ಯಾವನ್ನು ವಿರೋಧಿಸಲು ಸಾಧ್ಯವಾಗಿಲ್ಲ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಒಡಿಶಾ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳೆ

Comments

Leave a Reply

Your email address will not be published. Required fields are marked *