ಇಸ್ರೋ ವಿಜ್ಞಾನಿಯಾಗಲಿದ್ದಾರೆ ಶರ್ಮಿಳಾ ಮಾಂಡ್ರೆ – ಕನ್ನಡಕ್ಕೂ ಬರ್ತಾರಂತೆ..!

ಮುದ್ದು ಮುದ್ದಾದ ನಟನೆಯಿಂದಲೇ ಕನ್ನಡಿಗರ ಮನಸಲ್ಲುಳಿದಿರುವ ನಟಿ ಶರ್ಮಿಳಾ ಮಾಂಡ್ರೆ. ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರೋ ಶರ್ಮಿಳಾ ಈಗೊಂದಷ್ಟು ಕಾಲದಿಂದ ಚಿತ್ರರಂಗದಿಂದಲೇ ಮರೆಯಾದಂತಿದ್ದರು. ಅಭಿಮಾನಿಗಳೆಲ್ಲ ಮಿಸ್ ಮಾಡಿಕೊಳ್ಳುತ್ತಿರುವಾಗಲೇ ಶರ್ಮಿಳಾ ಮತ್ತೆ ಮರಳುವ ಸ್ಪಷ್ಟ ಸೂಚನೆ ರವಾನಿಸಿದ್ದಾರೆ.

ಒಂದಷ್ಟು ಸಮಯ ಶರ್ಮಿಳಾ ಬಿಡುವಿನಲ್ಲಿದ್ದದ್ದು ನಿಜ. ಆದರೆ ಈ ಅವಧಿಯಲ್ಲಿ ಅವರ ಮುಂದಿನ ನಡೆಗಳ ಬಗ್ಗೆ ಸ್ಪಷ್ಟವಾದ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರಂತೆ. ಇದೀಗ ಮತ್ತೆ ನಟನೆಗೆ ಎಂಟ್ರಿ ಕೊಡಲು ಉತ್ಸುಕರಾಗಿರುವ ಶರ್ಮಿಳಾ ತಮಿಳು ಚಿತ್ರವೊಂದರ ಮೂಲಕ ಸದ್ಯದಲ್ಲಿಯೇ ರೀ ಲಾಂಚ್ ಆಗಲಿದ್ದಾರಂತೆ.

ಈ ಸುದ್ದಿ ಕೇಳಿದಾಕ್ಷಣ ಕನ್ನಡದ ಶರ್ಮಿಳಾ ಅಭಿಮಾನಿಗಳು ನಿರಾಸೆ ಹೊಂದುವ ಅಗತ್ಯವೇನಿಲ್ಲ. ಯಾಕೆಂದರೆ, ತಮಿಳು ಚಿತ್ರದ ಜೊತೆಯೇ ಎರಡೆರಡು ಕನ್ನಡ ಚಿತ್ರಗಳ ಅವಕಾಶವೂ ಅವರ ಮುಂದಿದೆ. ಈ ಎರಡೂ ಚಿತ್ರಗಳ ಕಥೆ, ತಾರಾಗಣ ಮುಂತಾದ ಆಯ್ಕೆ ಪ್ರಕ್ರಿಯೇ ಚಾಲ್ತಿಯಲ್ಲಿದೆಯಂತೆ.

ಇದರಲ್ಲಿ ಒಂದು ಚಿತ್ರ ಇದೇ ಆಗಸ್ಟ್ ತಿಂಗಳಿಂದ ಆರಂಭವಾಗಲಿದೆ. ಆ ಚಿತ್ರದ ನಿರ್ದೇಶಕ ಯಾರು, ನಾಯಕನ್ಯಾರು ಮತ್ತು ಶೀರ್ಷಿಕೆ ಏನು ಎಂಬ ವಿಚಾರವನ್ನೆಲ್ಲ ಶರ್ಮಿಳಾ ನಿಗೂಢವಾಗಿಟ್ಟಿದ್ದಾರೆ. ಆದರೆ ಈ ಚಿತ್ರದಲ್ಲಿ ತಾನು ಇಸ್ರೋ ವಿಜ್ಞಾನಿಯಾಗಿ ನಟಿಸಲಿರೋದರ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ಅಂತೂ ಒಂದಷ್ಟು ಕಾಲ ಮರೆಯಾಗಿದ್ದ ಶರ್ಮಿಳಾ ಭರ್ಜರಿಯಾಗಿಯೇ ರೀ ಎಂಟ್ರಿ ಕೊಡಲಿದ್ದಾರೆಂಬುದಂತೂ ಸತ್ಯ!

Comments

Leave a Reply

Your email address will not be published. Required fields are marked *