ಭಾರೀ ಬಜೆಟ್ ಸಿನಿಮಾದಲ್ಲಿ ಶಾನ್ವಿ ಶ್ರೀವಾತ್ಸವ್

ಚಂದ್ರಿಕಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ಉತ್ತರ ಪ್ರದೇಶದ ಬೆಡಗಿ ಶಾನ್ವಿ ಶ್ರೀವಾತ್ಸವ್, ಆನಂತರ ಅವರು ಕನ್ನಡಿಗರಾಗಿಯೇ ಬೆಳೆದರು. ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿದರು. ಕನ್ನಡ ಕಲಿತು, ಇಲ್ಲಿಯೇ ನೆಲೆಯೂರಿದರು. ಇಂತಹ ನಟಿ ಇದೀಗ ಬಹುಕೋಟಿ ಬಜೆಟ್ ನ ಮಲಯಾಳಂ ಚಿತ್ರದಲ್ಲಿ ನಟಿಸಿದ್ದಾರೆ. ‘ಮಹಾವೀರ್ಯರ್’ ಹೆಸರಿನಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ನಿವಿನ್ ಪೌಲಿ ಮತ್ತು ಆಸಿಫ್ ಅಲಿ ನಾಯಕರು ಎನ್ನುವುದು ವಿಶೇಷ. ಇದನ್ನೂ ಓದಿ: ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ

ನಿವಿನ್ ಅವರು ಹೋಂ ಬ್ಯಾನರ್ ನಲ್ಲಿಯೇ ಈ ಚಿತ್ರ ತಯಾರಾಗಿದ್ದು, ಫ್ಯಾಂಟಸಿ ಕಥೆ ಹಂದಾರ ಹೊಂದಿದೆ. ಈ ಸಿನಿಮಾದಲ್ಲಿ ಶಾನ್ವಿ ವಿಭಿನ್ನ ರೀತಿಯ ಪಾತ್ರ ಮಾಡಿದ್ದಾರಂತೆ. ಕಾನೂನು, ಕಟ್ಟಳೆಯ ಅನೇಕ ದೃಶ್ಯಗಳು ಈ ಸಿನಿಮಾದಲ್ಲಿ ಇರುವುದರಿಂದ, ಈ ಸಿನಿಮಾ ಮನರಂಜನೆಯ ಜತೆಗೆ ಒಂದೊಳ್ಳೆ ಸಂದೇಶವನ್ನು ಈ ಸಮಾಜಕ್ಕೆ ನೀಡಲಿದೆ ಎಂದಿದ್ದಾರೆ. ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ

ಅಬ್ರಿದ್ ಶೈನ್ ಈ ಸಿನಿಮಾದ ನಿರ್ದೇಶಕರು. ಈ ಹಿಂದೆ ನಿವಿನ್ ಜತೆ ಆಕ್ಷನ್ ಹೀರೋ ಬಿಜು ಮತ್ತು 1983 ರಂತಹ ಚಿತ್ರಗಳನ್ನು ಮಾಡಿದ್ದಾರೆ. ಹತ್ತು ವರ್ಷಗಳ ನಂತರ ಶೈನ್ ಮತ್ತು ನಿವಿನ್ ಮತ್ತೆ ಜತೆಯಾಗಿ ಮಾಡಿರುವಂತಹ ಸಿನಿಮಾ ಇದಾಗಿದೆ. ಹಾಗಾಗಿ ಸಾಕಷ್ಟು ನಿರೀಕ್ಷೆಯಂತೂ ಮೂಡಿಸಿದೆ. ಇದನ್ನೂ ಓದಿ: ಬ್ಲಾಕ್ ಹಾಟ್ ಗೌನ್ ನಲ್ಲಿ ರಿಚಾ ಚಡ್ಡಾ : ಪಡ್ಡೆಗಳ ರಾಣಿಜೇನಿನ ಹಾಟ್ ಫೋಟೋ ಶೂಟ್

ಕೊರೋನಾ ಹಾವಳಿಯ ಮಧ್ಯೆಯೂ ಈ ಸಿನಿಮಾದ ಕೆಲಸಗಳು ನಡೆದಿವೆ. ಇದೊಂದು ಭಾರೀ ಬಜೆಟ್ ಸಿನಿಮಾವಾಗಿದ್ದರಿಂದ ಶೂಟಿಂಗ್ ಮಾಡುವುದು ಅನಿವಾರ್ಯವಾಗಿತ್ತು. ಹಾಗಾಗಿ ಸಾಕಷ್ಟು ರಿಸ್ಕ್ ತಗೆದುಕೊಂಡು ಈ ಸಿನಿಮಾ ಮಾಡಿದ್ದಾರಂತೆ ನಿರ್ದೇಶಕರು. ಹೆಸರಾಂತ ತಾರಾ ಬಳಗವೇ ಈ ಸಿನಿಮಾದಲ್ಲಿದ್ದು, ಸಿದ್ದೀಕಿ, ವಿಜಯ್ ಮೆನನ್, ಮಲ್ಲಿಕಾ ಸುಕಮಾರನ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಪಾತ್ರ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್ ಮತ್ತು ಟೀಸರ್ ರಿಲೀಸ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *