ಅಖಿಲ್‍ಗೆ ಜೊತೆಯಾದಳು ಅಂದಗಾತಿ ಶಾನ್ವಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಸ್ಟಾರ್ ನಟರಿಗೆಲ್ಲ ಸಾಥಿಯಾಗಿ ನಟಿಸುತ್ತಲೇ ಕನ್ನಡದಲ್ಲಿ ಚಾಲ್ತಿಯಲ್ಲಿರುವಾಕೆ ಶಾನ್ವಿ ಶ್ರೀವಾಸ್ತವ. ಇತ್ತೀಚೆಗಷ್ಟೇ ಉಪೇಂದ್ರ ಮತ್ತು ರವಿಚಂದ್ರನ್ ಒಟ್ಟಾಗಿ ನಟಿಸುತ್ತಿರೋ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದ ಶಾನ್ವಿ ಇದೀಗ ಮತ್ತೊಂದು ಚಿತ್ರವನ್ನೂ ಒಪ್ಪಿಕೊಂಡಿದ್ದಾಳೆ!

ಪಾರ್ವತಮ್ಮ ರಾಜ್ ಕುಮಾರ್ ಅವರ ಸೋದರಳಿಯ ಸೂರಜ್ ಚೊಚ್ಚಲ ಚಿತ್ರ ಅಖಿಲ್‍ಗೆ ಶಾನ್ವಿ ಶ್ರೀವಾಸ್ತವ ನಾಯಕಿಯಾಗಿದ್ದಾಳೆ. ಸೂರಜ್ ಮೊದಲ ಸಲ ನಾಯಕನಾಗಿ ಎಂಟ್ರಿ ಕೊಡುತ್ತಿರೋ ಈ ಚಿತ್ರಕ್ಕೆ ನಾಯಕಿ ಯಾರಾಗುತ್ತಾರೆಂಬ ಕುತೂಹಲ ಇದ್ದೇ ಇತ್ತು. ಈ ರೇಸಿನಲ್ಲಿ ಹಲವು ನಾಯಕಿಯರ ಹೆಸರುಗಳೂ ತೇಲಿ ಹೋಗಿದ್ದವು. ಆದರೀಗ ಶಾನ್ವಿ ಶ್ರೀವಾಸ್ತವ ಅದಕ್ಕೆ ನಿಕ್ಕಿಯಾಗಿದ್ದಾಳೆ.

ಕನ್ನಡ ಚಿತ್ರರಂಗಕ್ಕೆ ಬಂದು ಕೆಲವೇ ವರ್ಷಗಳಲ್ಲಿ ಶಾನ್ವಿ ವೆರೈಟಿ ವೆರೈಟಿ ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರಾಗಿದ್ದಾಳೆ. ಎಂಥಾದ್ದೇ ಪಾತ್ರವನ್ನಾದರೂ ಲೀಲಾಜಾಲವಾಗಿ ನಿರ್ವಹಿಸುವ ಕಲೆಗಾರಿಕೆ ಇರುವ ಈಕೆ ಅಖಿಲ್ ಚಿತ್ರದಲ್ಲಿಯೂ ಡಿಫರೆಂಟಾದೊಂದು ಪಾತ್ರದಲ್ಲಿ ನಟಿಸಲಿದ್ದಾಳಂತೆ. ಶಾನ್ವಿಯನ್ನು ಈವರೆಗೂ ಕೂಡಾ ಇಂಥಾ ಪಾತ್ರದಲ್ಲಿ ನೋಡಿರಲು ಸಾಧ್ಯವೇ ಇಲ್ಲ ಅಂತ ಚಿತ್ರ ತಂಡವೇ ಭರವಸೆ ಹೊಂದಿದೆ.

ಹೀರೋ ಆಗಿ ಎಂಟ್ರಿ ಕೊಡಲು ವರ್ಷಾಂತರಗಳಿಂದ ತಯಾರಿ ನಡೆಸಿಕೊಂಡೇ ಸೂರಜ್ ಅಖಿಲ್ ಮೂಲಕ ಅದನ್ನು ಸಾಕಾರಗೊಳಿಸಿಕೊಂಡಿದ್ದಾರೆ. ನಟನೆ, ಡ್ಯಾನ್ಸ್, ಫೈಟಿಂಗ್ ಸೇರಿದಂತೆ ಎಲ್ಲವನ್ನೂ ಶಾಸ್ತ್ರೋಕ್ತವಾಗಿ ಮುಗಿಸಿಕೊಂಡಿರುವ ಸೂರಜ್ ಮಾಸ್ ಪಾತ್ರದ ಮೂಲಕ ಪ್ರೇಕ್ಷಕರನ್ನು ತಲುಪಲು ತಯಾರಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *