ಶಂಕ್ರಣ್ಣನ ಪುಣ್ಯಸ್ಮರಣೆ ಮಾಡಿದರು ದರ್ಶನ್ ಅಭಿಮಾನಿಗಳು!

ಕನ್ನಡ ಚಿತ್ರರಂಗ ಎಂದೂ ಮರೆಯದ ಶಂಕರ್ ನಾಗ್ ನೆನಪಾಗಲು ನೆಪಗಳು ಬೇಕಿಲ್ಲ. ಈವತ್ತಿನ ಸ್ಟಾರ್ ನಟರನ್ನೂ ಕೂಡಾ ಸ್ಫೂರ್ತಿಯಂತೆ ಪೊರೆಯುತ್ತಾ ಬಂದಿರುವವರು ಶಂಕರ್ ನಾಗ್. ಇವರ ಪ್ರಭಾವದಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೂ ಹೊರತಾಗಿಲ್ಲ. ಅವರು ನಟಿಸಿದ್ದ ಸೂಪರ್ ಹಿಟ್ ಚಿತ್ರ ಸಾರಥಿ ಕೂಡಾ ಶಂಕರಣ್ಣನ ಪುಣ್ಯಸ್ಮರಣೆಯಂದೇ ಬಿಡುಗಡೆಯಾಗಿತ್ತು!

ಹಾಗಿರೋವಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಶಂಕರ್ ನಾಗ್ ಅವರನ್ನು ಸ್ಮರಿಸದಿರುತ್ತಾರೆಯೇ? ದರ್ಶನ್ ಅಭಿಮಾನಿಗಳೂ ಕೂಡಾ ಶಂಕರ್ ನಾಗ್ ಅವರನ್ನು ಅರ್ಥವತ್ತಾಗಿಯೇ ಸ್ಮರಿಸಿದ್ದಾರೆ. ಇದೇ ಸಂದರ್ಭದಲ್ಲಿ ಶಂಕರಣ್ಣ ಮತ್ತೆ ಹುಟ್ಟಿ ಬರುವಂತೆ ಪ್ರಾರ್ಥಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಪ್ರತೀ ವರ್ಷವೂ ತಮ್ಮದೇ ಆದ ರೀತಿಯಲ್ಲಿ ಶಂಕರ್ ನಾಗ್ ಅವರ ಸ್ಮರಣೆ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಬಗ್ಗೆ ಖುದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೂ ಕೂಡಾ ಖುಷಿಯಿರೋದು ಸುಳ್ಳಲ್ಲ.

ಇದು ಶಂಕರ್ ನಾಗ್ ಅವರ ವ್ಯಕ್ತಿತ್ವದ ಅಸಲೀ ಶಕ್ತಿಯೂ ಹೌದು. ತಾವು ನಿರ್ಗಮಿಸಿದ ನಂತರದ ತಲೆಮಾರಿನ ನಟರನ್ನೂ, ಅವರ ಅಭಿಮಾನಿಗಳನ್ನೂ ಅವರ ನೆನಪು ಇಷ್ಟೊಂದು ಕಾಡುವಂತೆ ಮಾಡಿರೋದು ಶಂಕರ್‍ನಾಗ್ ಕ್ರಿಯೇಟಿವಿಟಿ, ಕನಸು ಮತ್ತು ಸಾಧಿಸೋ ಛಲದ ಕಾರಣದಿಂದ. ಅವರ ಹೊಸತನದ ನೋಟ, ಹುಮ್ಮಸ್ಸು ಎಲ್ಲ ಕಾಲಕ್ಕೂ ಎಲ್ಲರಿಗೂ ಸ್ಫೂರ್ತಿ. ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳೂ ಕೂಡಾ ಅಂಥಾದ್ದೇ ಭಾವನೆಯನ್ನು ಹೊಂದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *