ಐಪಿಎಲ್‍ನಲ್ಲಿ ನಾನು ಕೈಫ್ ಅಹಂಕಾರ ಇಳಿಸಿದ್ದೆ: ಶೇನ್ ವಾರ್ನ್

ಮುಂಬೈ: ಚೊಚ್ಚಲ ಐಪಿಎಲ್ ಕ್ರಿಕೆಟ್ ನಡೆಯುವ ಸಂದರ್ಭದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾಗ ನಾನು ಮೊಹಮ್ಮದ್ ಕೈಫ್ ಅವರ ಅಹಂಕಾರವನ್ನು ಇಳಿಸಿದ್ದೆ ಎಂದು ಆಸ್ಟ್ರೇಲಿಯಾ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೇಳಿದ್ದಾರೆ.

ಶೇನ್ ವಾರ್ನ್ ತಮ್ಮ ಕ್ರಿಕೆಟ್ ಜೀವನದ ಬಗ್ಗೆ `ನೋ ಸ್ಪಿನ್’ ಹೆಸರಿನಲ್ಲಿ ಆತ್ಮ ಚರಿತ್ರೆ ಬರೆದಿದ್ದು ಇದರಲ್ಲಿ ಐಪಿಎಲ್ ಪಂದ್ಯಗಳ ವೇಳೆ ನಡೆದ ಘಟನೆಯನ್ನು ಮೆಲುಕು ಹಾಕಿದ್ದಾರೆ.

ವಾರ್ನ್ ಪುಸ್ತಕದಲ್ಲಿ ಏನಿದೆ?
ನನ್ನ ತಂಡದಲ್ಲಿ ಕೈಫ್ ಆಡುತ್ತಿದ್ದರು. ಒಂದು ದಿನ ರಾಜಸ್ಥಾನ ತಂಡ ಹೋಟೆಲ್‍ಗೆ ಹೋದ ಸಂದರ್ಭದಲ್ಲಿ ಆಟಗಾರರೆಲ್ಲರೂ ತಮ್ಮ ರೂಮ್ ಕೀ ತೆಗೆದುಕೊಂಡು ಅವರ ಕೊಠಡಿಗೆ ತೆರಳಿದರು. ಈ ಸಮಯದಲ್ಲಿ ಕೈಫ್ ರಿಸೆಪ್ಷನಿಸ್ಟ್ ಬಳಿ ತೆರಳಿ “ನಾನು ಕೈಫ್” ಎಂದು ಹೇಳಿದರು.

ಈ ಸಮಯದಲ್ಲಿ ಹೋಟೆಲ್ ಸಿಬ್ಬಂದಿ,”ನಮ್ಮಿಂದ ಏನು ಸಹಾಯ ಬೇಕು” ಎಂದು ಕೇಳಿದ್ದರು. ಇದಕ್ಕೆ ಕೈಫ್,”ನಾನು ಕೈಫ್” ಎಂದು ಮತ್ತೊಮ್ಮೆ ಹೇಳಿದರು. ಕೈಫ್ ಸಿಬ್ಬಂದಿ ಜೊತೆ ಮಾತನಾಡುವುದನ್ನು ಕಂಡು ನಾನು ಅಲ್ಲಿಗೆ ತೆರಳಿ,”ಏನಾದ್ರೂ ಸಮಸ್ಯೆ ಇದ್ಯಾ?” ಎಂದು ಪ್ರಶ್ನಿಸಿದೆ. ಈ ಸಮಯದಲ್ಲೂ ಕೈಫ್,”ನಾನು ಕೈಫ್” ಎಂದು ಉತ್ತರಿಸಿದರು.

“ನಾನು ಟೀಂ ಇಂಡಿಯಾದ ಹಿರಿಯ ಆಟಗಾರ, ಹೀಗಾಗಿ ನನಗೆ ದೊಡ್ಡ ಕೊಠಡಿ ನೀಡಬೇಕು” ಎನ್ನುವ ಅರ್ಥದಲ್ಲಿ ಕೈಫ್ ಹೇಳುತ್ತಿದ್ದಾರೆ ಎನ್ನುವುದು ನನಗೆ ಗೊತ್ತಾಯಿತು. ಇದಕ್ಕೆ ನಾನು,”ನನ್ನನ್ನು ಬಿಟ್ಟು ಉಳಿದ ಎಲ್ಲರಿಗೂ ಸಣ್ಣ ರೂಮ್ ನೀಡಲಾಗಿದೆ. ನನ್ನ ಕೊಠಡಿಯಲ್ಲಿ ಆಗಾಗ ಸಭೆ ನಡೆಯಲಿರುವ ಕಾರಣ ದೊಡ್ಡ ರೂಮ್ ನೀಡಲಾಗಿದೆ” ಎಂದಾಗ ಕೈಫ್ ಅಲ್ಲಿಂದ ತೆರಳಿದರು ಎಂದು ವಾರ್ನ್ ಬರೆದುಕೊಂಡಿದ್ದಾರೆ.

ತಮ್ಮ ಪುಸ್ತಕದಲ್ಲಿ ವಾರ್ನ್,”ಕೆಲ ಭಾರತೀಯ ಹಿರಿಯ ಆಟಗಾರರು ಕಿರಿಯ ಆಟಗಾರಲ್ಲಿ ಬ್ಯಾಗ್ ತರಲು ಹೇಳುತ್ತಾರೆ. ನನಗೆ ಇದು ಸರಿ ಕಾಣುವುದಿಲ್ಲ. ಮೈದಾನದಲ್ಲಿ ಎಲ್ಲರೂ ಸಮಾನರು. ಹಿರಿಯರು, ಕಿರಿಯರು ಎಂಬುದಿಲ್ಲ. ಎಲ್ಲರಿಗೂ ಒಂದೇ ನಿಯಮ ಅನ್ವಯವಾಗಬೇಕು” ಎಂದು ಬರೆದುಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *