ರಂಜಾನ್ ಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ನೀಡಿದ ಶಾರುಖ್ ಖಾನ್!

ನವದೆಹಲಿ: ರಂಜಾನ್ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಶಾರುಖ್ ಖಾನ್ ಗಿಫ್ಟ್ ನೀಡಿದ್ದು ತಮ್ಮ `ಝೀರೋ’ ಚಿತ್ರದ ಟೀಸರ್ ಅನ್ನು ಬಿಡುಗಡೆಗೊಳಿಸಿದ್ದಾರೆ.

ಝೀರೋ ಚಿತ್ರವು ಬಾಲಿವುಡ್‍ನ ಖ್ಯಾತ ನಟ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರವಾಗಿದೆ. ಈ ಚಿತ್ರದಲ್ಲಿ ಖಾನ್‍ರವರರು ಬಾಬು ಸಿಂಗ್ ಎಂಬ ಕುಳ್ಳ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಖಾನ್‍ಗಳು ಒಟ್ಟಿಗೆ ಸೇರಿರುವುದು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.

ಚಿತ್ರದ ಟೀಸರ್ ನಲ್ಲಿ  ಬಾಬು ಸಿಂಗ್ ಒಂದು ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ಸಲ್ಮಾನ್ ಖಾನ್‍ರವರನ್ನು ಭೇಟಿ ಮಾಡುತ್ತಾರೆ. ಆಗ ಸಲ್ಮಾನ್ ಖಾನ್ “ಸುನಾ ಹೈ ಜಿಸ್ಕೆ ಪೀಚೆ ಲಗ್ ಜಾತೆ ಹೋ, ಉಸ್ಕ ಲೈಫ್ ಬನಾ ದೇತಾ ಹೋ? (ನಾವು ಯಾವುದರ ಹಿಂದೆ ಹೋಗುತ್ತೇವೋ ಅದರ ಜೀವನ ನಿರ್ಮಾಣವಾಗುತ್ತದೆ) ಎಂದು ಹೇಳುತ್ತಾರೆ. ಆಗ ಬಾಬುಸಿಂಗ್ ಸಲ್ಮಾನ್‍ಗೆ ವಂದಿಸುತ್ತಾರೆ. ಅಲ್ಲದೇ ಇಬ್ಬರೂ ಒಂದೇ ತರಹದ ಬಟ್ಟೆ ಧರಿಸಿ ವೇದಿಕೆಯ ಮೇಲೆ ಕುಣಿದು ಕುಪ್ಪಳಿಸುತ್ತಾರೆ. ಬಾಬುಸಿಂಗ್ ಸಲ್ಮಾನ್‍ರನ್ನು ತಬ್ಬಿಕೊಂಡು ಚುಂಬಿಸುವ ಟೀಸರ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಚಿತ್ರದಲ್ಲಿ ಕತ್ರೀನಾ ಕೈಫ್ ಕೂಡ ನಟಿಸಿದ್ದು, ಬಾಬು ಸಿಂಗ್ ಟೀ ಶರ್ಟ್ ಮೇಲೆ ಅವರ ಚಿತ್ರ ಕಾಣಿಸಿಕೊಂಡಿದೆ.

ಶಾರುಖ್ ಖಾನ್‍ರವರು ಸೋಶಿಯಲ್ ಮಿಡಿಯಾಗಳಲ್ಲಿ ಝೀರೋ ಚಿತ್ರದ ಟೀಸರ್ ಗಳನ್ನು ಶೇರ್ ಮಾಡಿದ್ದಾರೆ. ಚಿತ್ರತಂಡದ ಪರವಾಗಿ ಎಲ್ಲಾ ಅಭಿಮಾನಿಗಳಿಗೆ ರಂಜಾನ್ ಹಬ್ಬದ ಶುಭಕೋರಿದ್ದಾರೆ. ಈ ಟೀಸರ್ ನಿಮಗೆ ಇಷ್ಟ ಆಗುತ್ತದೆ ಎಂದು ತಮ್ಮ ಟ್ಟಿಟ್ಟರ್ ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಇದೂವರೆಗೂ ನೀವು ನೋಡಿರದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಾರೂಖ್ ಖಾನ್

ಝೀರೋ ಚಿತ್ರದಲ್ಲಿ ಶಾರುಖ್ ಖಾನ್, ಅನುಷ್ಕಾ ಶರ್ಮ ಅಭಿನಯಿಸಿದ್ದು ವಿಶೇಷ ಪಾತ್ರದಲ್ಲಿ ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್ ಕಾಣಿಸಿಕೊಂಡಿದ್ದಾರೆ. ಆನಂದ್ ಎಲ್ ರೈರವರು ಚಿತ್ರ ನಿರ್ದೇಶಿಸಿದ್ದು, ಇದೇ ವರ್ಷ ಡಿಸೆಂಬರ್ ನಲ್ಲಿ ಚಿತ್ರ ತೆರೆಕಾಣಲಿದೆ ಎಂದು ಚಿತ್ರ ತಂಡ ತಿಳಿಸಿದೆ.

Comments

Leave a Reply

Your email address will not be published. Required fields are marked *