55.60 ಕೋಟಿ ರೂ. ನೀಡಿ ಅಪಾರ್ಟ್ ಮೆಂಟ್‍ ಖರೀದಿಸಿದ ಶಾಹಿದ್ ಕಪೂರ್: ಫೋಟೋಗಳಲ್ಲಿ ನೋಡಿ

ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್ ಇತ್ತೀಚಿಗೆ ಒಬೇರಾಯ್ ರಿಯೇಟರ್ಸ್‍ನ ತ್ರೀ ಸಿಕ್ಸ್ ಟಿ ವೆಸ್ಟ್ ಪ್ರಾಜೆಕ್ಟ್ ನಲ್ಲಿ 55.60 ಕೋಟಿ ರೂ. ಹಣ ನೀಡಿ ಡ್ಯೂಪ್ಲೆಕ್ಸ್ ಅಪಾರ್ಟ್ ಮೆಂಟ್‍ ಖರೀದಿಸಿದ್ದಾರೆ.

ಮುಂಬೈನ ವೊರ್ಲಿ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ತ್ರೀ ಸಿಕ್ಸ್ ಟಿ ವೆಸ್ಟ್ ಅಪಾರ್ಟ್ ಮೆಂಟ್‍ನಲ್ಲಿ ಶಾಹಿದ್ ಡ್ಯೂಪ್ಲೆಕ್ಸ್ ಹೌಸ್ ಖರೀದಿಸಿದ್ದಾರೆ. ಸಮುದ್ರ ಮುಂದೆಯಿರುವ ಈ ಅಪಾರ್ಟ್‍ಮೆಂಟ್‍ಗೆ ಶಾಹಿದ್ 55.60 ಕೋಟಿ ರೂ. ನೀಡಿದ್ದಾರೆ. ಅಲ್ಲದೇ 3 ಕೋಟಿ ರೂ. ಅನ್ನು ಸ್ಟಾಂಪ್ ಡ್ಯೂಟಿ ಆಗಿ ನೀಡಿ ರಿಜಿಸ್ಟ್ರೇಶನ್ ಮಾಡಿಕೊಂಡಿದ್ದಾರೆ.

ಶಾಹಿದ್ ಹಾಗೂ ಅವರ ಪತ್ನಿ ಮೀರಾ ರಜ್‍ಪೂತ್ ಅವರ ಹೆಸರಿನಲ್ಲಿ ಈ ಅಪಾರ್ಟ್ ಮೆಂಟ್ ರಿಜಿಸ್ಟರ್ ಆಗಿದೆ. ವರದಿಗಳ ಪ್ರಕಾರ ಈ ಅಪಾರ್ಟ್ ಮೆಂಟ್ 8,625 ಚದರ ಅಡಿ ಹೊಂದಿದ್ದು, 6 ಪಾರ್ಕಿಂಗ್ ಸ್ಥಳ ಸಿಗಲಿದೆ.

ಈಗಾಗಲೇ ಈ ವೋರ್ಲಿ ಅಪಾರ್ಟ್‍ಮೆಂಟ್‍ನಲ್ಲಿ ನಟ ಅಕ್ಷಯ್ ಕುಮಾರ್ ಹಾಗೂ ಟ್ವಿಂಕಲ್ ಖನ್ನಾ, ಅಭಿಷೇಕ್ ಹಾಗೂ ಐಶ್ವರ್ಯ ರೈ ಬಚ್ಚನ್ ವಾಸಿಸುತ್ತಿದ್ದಾರೆ. ಈಗ ಶಾಹಿದ್ ಕೂಡ ಇದೇ ಅಪಾರ್ಟ್ ಮೆಂಟ್‍ನಲ್ಲಿ ವಾಸಿಸಲಿದ್ದಾರೆ.

ಸದ್ಯ ಜುಹು ಪ್ರದೇಶದಲ್ಲಿ ತನ್ನ ಕುಟುಂಬದವರ ಜೊತೆ ವಾಸಿಸುತ್ತಿರುವ ಶಾಹಿದ್ ತಮ್ಮ ಮನೆಯ ಫೊಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ತಮ್ಮ ಮಗಳ ಜೊತೆ ಜುಹು ಮನೆಯಲ್ಲಿ ಸಮಯ ಕಳೆಯುತ್ತಿರುವ ಫೋಟೋ ಹಾಗೂ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

#worlddanceday #havefeetwilldance #mj dance is in your blood.

A post shared by Shahid Kapoor (@shahidkapoor) on

Pool time with missy. #besttimes

A post shared by Shahid Kapoor (@shahidkapoor) on

Comments

Leave a Reply

Your email address will not be published. Required fields are marked *