ಪಾಸ್ ಪೋರ್ಟ್ ಗಾಗಿ ಮುಂಬೈ ಹೈಕೋರ್ಟ್ ಮೆಟ್ಟಿಲು ಏರಿದ ಶಾರುಖ್ ಪುತ್ರ

ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮುಂಬೈ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ. ಈ ಹಿಂದೆ ಅವರ ಮೇಲೆ ಡ್ರಗ್ಸ್ ಕೇಸ್ ಆರೋಪ ಹೊರಿಸಲಾಗಿತ್ತು. ಅಲ್ಲದೇ, ಜೈಲಿಗೂ ಕಳುಹಿಸಲಾಗಿತ್ತು. ಈ ಸಮಯದಲ್ಲಿ ದೇಶ ಬಿಡದಿರುವಂತೆ ಸೇರಿದಂತೆ ಹಲವು ನಿಬಂಧನೆಗಳನ್ನು ಹಾಕಿ ಜಾಮೀನಿನ ಮೇಲೆ ಆರ್ಯನ್ ಖಾನ್ ಅವರನ್ನು ಬಿಡುಗಡೆ ಮಾಡಲಾಗಿತ್ತು. ಹಾಗಾಗಿ ಅವರ ಪಾಸ್ ಪೋರ್ಟ್ ಅನ್ನು ಎನ್.ಸಿ.ಬಿ ವಶಪಡಿಸಿಕೊಂಡಿತ್ತು.

ಇದೀಗ ಆರ್ಯನ್ ಗೆ ಕ್ಲೀನ್ ಚಿಟ್ ನೀಡಲಾಗಿದೆ. ಡ್ರಗ್ಸ್ ಕೇಸ್ ನಲ್ಲಿ ಅವರು ಡ್ರಗ್ಸ್ ಸೇವಿಸಿರಲಿಲ್ಲ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಕೇಸ್ ಕೈ ಬಿಡಲಾಗಿದೆ. ಹಾಗಾಗಿ ವಶಪಡಿಸಿಕೊಂಡಿರುವ ತಮ್ಮ ಪಾಸ್ ಪೋರ್ಟ್ ಅನ್ನು ಮರಳಿ ಕೊಡಿಸುವಂತೆ ಅವರು ಮುಂಬೈ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ. ಅವರು ವಿದೇಶಕ್ಕೆ ತೆರಳಬೇಕಾಗಿದ್ದರಿಂದ ಆದಷ್ಟು ಬೇಗ ಪಾಸ್ ಪೋರ್ಟ್ ಕೊಡಿಸುವಂತೆ ಆರ್ಯನ್ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಅನಾಥ ಮಹಿಳೆಗೆ ಮನೆ ಕಟ್ಟಿಸಿಕೊಟ್ಟ ಕಿಚ್ಚ ಸುದೀಪ್

ಮುಂಬೈನ ಐಷಾರಾಮಿ ಹಡಗಿನಲ್ಲಿ ನಡೆದ ಡ್ರಗ್ಸ್ ಪಾರ್ಟಿಯಲ್ಲಿ ಆರ್ಯನ್ ಭಾಗಿಯಾಗಿದ್ದರು ಮತ್ತು ಡ್ರಗ್ಸ್ ಸೇವಿಸಿದ್ದರು ಎನ್ನುವ ಕಾರಣಕ್ಕಾಗಿ 2021 ಅಕ್ಟೋಬರ್ 2 ರಂದು ಬಂಧನವಾಗಿತ್ತು. 25 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೂ ಅವರನ್ನು ಕಳುಹಿಸಲಾಗಿತ್ತು. 25 ದಿನಗಳ ಬಳಿಕೆ ಅವರಿಗೆ ಜಾಮೀನು ಸಿಕ್ಕಿತ್ತು. ನಂತರ ಯಾವುದೇ ಸಾಕ್ಷಿಗಳು ಸಿಗಲಿಲ್ಲ ಅನ್ನುವ ಕಾರಣಕ್ಕಾಗಿ ಕೇಸ್ ಖುಲಾಸೆ ಆಗಿತ್ತು.

Live Tv

Comments

Leave a Reply

Your email address will not be published. Required fields are marked *