ರಿಕ್ವೆಸ್ಟ್‌ ಮಾಡಿ ಕೊಹ್ಲಿ ಕೈಹಿಡಿದು ಡಾನ್ಸ್‌ ಮಾಡಿಸಿದ ಬಾದ್‌ ಷಾ – ಚಾಂಪಿಯನ್ಸ್‌ ಆಗೋಣ ಎಂದ ಜೂಹಿ ಚಾವ್ಲಾ

ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್‌ನಲ್ಲಿ ಗುರುವಾರ ಆರ್‌ಸಿಬಿ (RCB) ಮತ್ತು ಕೋಲ್ಕತ್ತಾ ನೈಟ್‌ರೈಡರ್ಸ್(KKR) ನಡುವೆ ನಡೆದ ಪಂದ್ಯದಲ್ಲಿ ಕೆಕೆಆರ್‌ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿ ಭರ್ಜರಿ ಜಯ ಸಾಧಿಸಿತು.

ಪಂದ್ಯ ವೀಕ್ಷಣೆಗೆ ಆಗಮಿಸಿದ್ದ ನಟ ಶಾರೂಖ್‌ ಖಾನ್‌ (Shah Rukh Khan) ಪಂದ್ಯ ಮುಗಿದ ಬಳಿಕ ತಮ್ಮ ತಂಡದ ಆಟಗಾರರನ್ನ ಭೇಟಿಯಾದರು. ಇದೇ ವೇಳೆ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿಯನ್ನೂ (Virat Kohli) ಭೇಟಿಯಾದರು. ಕಂಡೊಡನೆ ಕೊಹ್ಲಿಯನ್ನ ಅಪ್ಪಿಕೊಂಡ ಶಾರೂಖ್‌ ಖಾನ್‌ ರಿಕ್ವೆಸ್ಟ್‌ ಮಾಡಿ ʻಪಠಾಣ್‌ʼ ಸಿನಿಮಾದ (Pathaan Cinema) ʻಜೂಮೆ ಜೋ ಪಠಾಣ್‌ʼ ಹಾಡಿಗೆ ಡಾನ್ಸ್‌ ಮಾಡಿಸಿದರು. ಸ್ವತಃ ತಾವೇ ಕೊಹ್ಲಿ ಕೈ ಹಿಡಿದು ಹೇಳಿಕೊಟ್ಟು ಡಾನ್ಸ್‌ ಮಾಡಿಸಿದರು.

ಈ ವೀಡಿಯೋ ತುಣುಕು ಜಾಲತಾಣದಲ್ಲಿ ಹರಿದಾಡುತ್ತಿದ್ದು, ಲಕ್ಷಾಂತರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಿಂಗ್‌ ಕೊಹ್ಲಿ, ಬಾಲಿವುಡ್‌ ಬಾದ್‌ ಷಾ ಇಬ್ಬರನ್ನ ಒಂದೇ ವೇದಿಕೆಯಲ್ಲಿ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸೋದೇಕೆ ಗೊತ್ತಾ – ಚಿಯರ್‌ ಗರ್ಲ್ಸ್‌ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ

ಶಾರುಖ್ ಖಾನ್ ಪಠಾಣ್ ಸಿನಿಮಾ ಥಿಯೇಟರ್ ನಲ್ಲಿ ಈಗಾಗಲೇ ದಾಖಲೆ ಬರೆದಿದ್ದು, OTTಯಲ್ಲೂ ಭರ್ಜರಿ ಪ್ರದರ್ಶನ ಕಾಣ್ತಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಆಕ್ಷನ್ ಭರಿತ ಬಾಲಿವುಡ್ ಬ್ಲಾಕ್ ಬಸ್ಟರ್ ಪಠಾಣ್ ಚಿತ್ರ ಅಮೆಜಾನ್ ಪ್ರೈಮ್ ವೀಡಿಯೋ ಪ್ಲಾಟ್‌ಫಾರ್ಮ್ ನಲ್ಲಿ ಸ್ಟ್ರೀಮ್ ಆಗುತ್ತಿದೆ. ಇದನ್ನೂ ಓದಿ: IPL 2023: ಬ್ಯೂಸಿ ಶೆಡ್ಯೂಲ್‌ನಲ್ಲೂ ತವರಿನಲ್ಲಿ ಐಪಿಎಲ್ ವೀಕ್ಷಿಸಿದ ಬಾಲಿವುಡ್ ಬಾದ್ ಷಾ

ಚಾಂಪಿಯನ್ಸ್‌ ಆಗೋಣ: ಕೆಕೆಆರ್‌ ಗೆಲುವಿನ ಕುರಿತು ಪ್ರತಿಕ್ರಿಯೆ ನೀಡಿದ ನಟಿ ಜೂಹಿ ಚಾವ್ಲಾ (Juhi Chawla), ನಮ್ಮ ತಂಡದ ಪ್ರದರ್ಶನದಿಂದ ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಎಲ್ಲಾ ಪಂದ್ಯಗಳು ಹೀಗೆಯೇ ಕೊನೆಗೊಳ್ಳಲಿ ಎಂದು ನಾನು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ಈ ವರ್ಷ ಫೈನಲ್‌ಗೆ ಬರೋಣ, ನಾವು ಚಾಂಪಿಯನ್‌ಗಳಾಗೋಣ ಎಂದು ಕೆಕೆಆರ್‌ ಆಟಗಾರರಿಗೆ‌ ಸ್ಫೋರ್ತಿ ತುಂಬಿದ್ದಾರೆ.