ಲಾ ಟ್ರೋಬ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಶಾರೂಕ್ ಖಾನ್

ಕ್ಯಾನ್ಬೆರಾ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಅವರು ಮೆಲ್ಬೋರ್ನ್ ಮೂಲದ ಲಾ ಟ್ರೋಬ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

ಭಾರತೀಯ ಚಿತ್ರರಂಗ ಹೊರತುಪಡಿಸಿ ಶಾರೂಕ್ ಖಾನ್ ಅವರು ಮೀರ್ ಫೌಂಡೇಶನ್ ಮೂಲಕ ದೀನದಲಿತ ಮಕ್ಕಳು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದ್ದಕ್ಕೆ ಈ ಡಾಕ್ಟರೇಟ್ ನೀಡಲಾಗಿದೆ. ಈ ಬಗ್ಗೆ ಲಾ ಟ್ರೋಬ್ ವಿಶ್ವವಿದ್ಯಾಲಯ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶಾರೂಕ್ ಖಾನ್ ಡಾಕ್ಟರೇಟ್ ಪಡೆಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಬಳಿಕ ಮಾತನಾಡಿದ ಶಾರೂಕ್ ಖಾನ್, ಭಾರತೀಯ ಸಂಸ್ಕೃತಿಯೊಂದಿಗೆ ಸುದೀರ್ಘ ಒಡನಾಟ ಮತ್ತು ಮಹಿಳಾ ಸಮಾನತೆಗಾಗಿ ಪ್ರತಿಪಾದಿಸುವಲ್ಲಿ ಪ್ರಭಾವಶಾಲಿ ದಾಖಲೆಯನ್ನು ಹೊಂದಿರುವ ಲಾ ಟ್ರೋಬ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆಯಲು ಹೆಮ್ಮೆಯಾಗುತ್ತಿದೆ. ಈ ಗೌರವ ಡಾಕ್ಟರೇಟ್ ಸ್ವೀಕರಿಸಲು ನನಗೆ ನಿಜವಾಗಿಯೂ ಖುಷಿಯಾಗುತ್ತಿದೆ. ನನ್ನ ಸಾಧನೆಗಳನ್ನು ಗುರುತಿಸಿದ್ದಕ್ಕಾಗಿ ಲಾ ಟ್ರೋಬ್‍ಗೆ ಪ್ರಾಮಾಣಿಕವಾಗಿ ಧನ್ಯವಾದ ತಿಳಿಸುತ್ತೇನೆ” ಎಂದು ಹೇಳಿದ್ದಾರೆ.

ಲಾ ಟ್ರೋಬ್ ವಿಶ್ವವಿದ್ಯಾಲಯವು ಶಾರೂಖ್ ಖಾನ್ ಅವರಿಗೆ ಡಾಕ್ಟರ್ ಆಫ್ ಲೆಟರ್ಸ್ ಜೊತೆ ಗೌರವ ನೀಡಿದ ಮೊದಲ ಆಸ್ಟ್ರೇಲಿಯಾ ವಿಶ್ವವಿದ್ಯಾಲಯವಾಗಿದೆ. ಚಲನಚಿತ್ರೋತ್ಸವದಲ್ಲಿ ಶಾರೂಕ್ ಅವರಿಗೆ ‘ಎಕ್ಸಲೆನ್ಸ್ ಇನ್ ಸಿನಿಮಾ’ ಪ್ರಶಸ್ತಿ ಕೂಡ ದೊರೆತಿದೆ.

ಈ ಮೊದಲು ಶಾರೂಕ್ ಖಾನ್ ಅವರಿಗೆ ನಾಲ್ಕು ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿ ಗೌರವಿಸಿದೆ. 2009 ಬೆಡ್‍ಫೋಡ್ರ್ಶೈರ್ ವಿಶ್ವವಿದ್ಯಾಲಯ, 2015ರಲ್ಲಿ ಎಡಿನ್‍ಬರ್ಗ್ ವಿಶ್ವವಿದ್ಯಾಲಯ, 2016ರಲ್ಲಿ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯ, 2019ರಲ್ಲಿ ಯೂನಿವರ್ಸಿಟಿ ಆಫ್ ಲಾನಿಂದ ಡಾಕ್ಟರೇಟ್ ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *