ಶಾಕುಂತಲಂ ಫಸ್ಟ್ ಪೋಸ್ಟರ್ ಔಟ್ – ಶಕುಂತಲೆ ರೂಪದಲ್ಲಿ ಸಮಂತಾ ಫುಲ್ ಮಿಂಚಿಂಗ್

ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಅಭಿನಯದ ಬಹು ನಿರೀಕ್ಷಿತ ಪೌರಾಣಿಕ ಸಿನಿಮಾ ಶಾಕುಂತಲಂ ಫಸ್ಟ್ ಪೋಸ್ಟರ್ ಬಿಡುಗಡೆಗೊಂಡಿದೆ.

 

ಶಾಕುಂತಲಂ ಸಿನಿಮಾದಲ್ಲಿ ರಾಜಕುಮಾರಿ ಪಾತ್ರದಲ್ಲಿ ಮಿಂಚುತ್ತಿರುವ ಸಮಂತಾ ಪೋಸ್ಟರ್‌ನಲ್ಲಿ ಬಿಳಿ ಸೀರೆಯುಟ್ಟು ಪ್ರಕೃತಿಯ ಹಾಗೂ ಜಿಂಕೆಗಳ ಮಧ್ಯೆ ಕುಳಿತು ಮಿರ ಮಿರ ಕಂಗೊಳಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆ ಲಕ್ಷಗಟ್ಟಲೆ ಲೈಕ್ಸ್ ಬಂದಿದ್ದು, ಸಮಂತಾ ಲುಕ್‍ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಹಿಂದೆಂದೂ ಕಾಣಿಸಿಕೊಳ್ಳದ ವಿಭಿನ್ನ ಪಾತ್ರದಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ ಸಮಂತಾರನ್ನು ಬಿಗ್ ಸ್ಕ್ರೀನ್ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಈ ಚಿತ್ರಕ್ಕೆ ನಿರ್ದೇಶಕ ಗುಣಶೇಖರ್ ಆ್ಯಕ್ಷನ್ ಕಟ್ ಹೇಳಿದ್ದು, ನೀಲಿಮಾ ಗುಣ ಬಂಡವಾಳ ಹೂಡಿದ್ದಾರೆ. 2022ರ ಮೋಸ್ಟ್ ಎಕ್ಸ್‍ಪೆಕ್ಟೆಡ್ ಸಿನಿಮಾಗಳಲ್ಲಿ ಶಾಕುಂತಲಂ ಚಿತ್ರ ಕೂಡ ಒಂದಾಗಿದ್ದು, ಪ್ರಸ್ತುತ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿದೆ. ಈ ಸಿನಿಮಾದ ಮೊದಲ ಪೋಸ್ಟರ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇದನ್ನೂ ಓದಿ: ಈ ಹುಡುಗಿಗೆ ಜಿಮ್ ನಲ್ಲಿ ಸಿಕ್ತಂತೆ ನಟಿಸೋಕೆ ಅವಕಾಶ

 

View this post on Instagram

 

A post shared by Samantha (@samantharuthprabhuoffl)

ಈ ಸಿನಿಮಾ ಜನಪ್ರಿಯ ಭಾರತೀಯ ನಾಟಕ ಕಾಳಿದಾಸ ಹಾಗೂ ಶಾಕುಂತಲಾ ಪೇಮ ಕಥಾಹಂದರವನ್ನು ಆಧರಿಸಿದ್ದು, ನಟ ದೇವ್ ಮೋಹನ್ ದುಷ್ಯಂತನ ಪ್ರಾತದಲ್ಲಿ ಕಾಣಿಸಿಕೊಳ್ಳಿದ್ದಾರೆ. ಇನ್ನೂ ಶಾಕುಂತಲಂ ಪೋಷಕರ ಪಾತ್ರದಲ್ಲಿ ನಟಿ ಆದಿತಿ ಬಾಲನ್ ಮತ್ತು ಮೋಹನ್ ಬಾಬು ಅಭಿನಯಿಸುತ್ತಿದ್ದು, ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಪುತ್ರಿ ಅರ್ಹಾ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾಳೆ. ಚಿತ್ರಕ್ಕೆ ಮಣಿ ಶರ್ಮಾ ಅವರು ಸಂಗೀತ ಸಂಯೋಜಿಸಿದ್ದು, ಗುಣ ಟೀಮ್‍ ವರ್ಕ್ ಮತ್ತು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಜಂಟಿಯಾಗಿ ನಿರ್ಮಿಸಿದೆ.

ಟಾಲಿವುಡ್‍ನ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ನಟಿ ಸಮಂತಾ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದ ಊ ಅಂಟಾವಾ ಮಾಮ ಸಾಂಗ್‍ನಲ್ಲಿ ಸೊಂಟ ಬಳುಕಿಸಿದ್ದ ಸಮಂತಾಗೆ ದೊಡ್ಡ ಹಿಟ್ ಸಿಕ್ಕಿತು. ಈ ಮುನ್ನ ಫ್ಯಾಮಿಲಿ ಮ್ಯಾನ್ ವೆಬ್ ಸರಣಿ ಕೂಡ ಸಕ್ಸಸ್ ಕಂಡಿತ್ತು. ಇದೀಗ ಮೊದಲ ಬಾರಿಗೆ ಪೌರಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಂತಾಗೆ ಶಾಕುಂತಲಂ ಸಿನಿಮಾ ಕೂಡ ಲಕ್ ತಂದು ಕೊಡುತ್ತಾ ಕಾದು ನೋಡಬೇಕಾಗಿದೆ. ಇದನ್ನೂ ಓದಿ: ಪುಷ್ಪ ಸಿನಿಮಾಗೆ ದಾದಾಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ – ರಣವೀರ್‌ ಸಿಂಗ್‌ ಅತ್ಯುತ್ತಮ ನಟ

Comments

Leave a Reply

Your email address will not be published. Required fields are marked *