ಅಮೆರಿಕದ ಮಹಿಳೆಗೆ ಮಸಾಜ್ ಮಾಡೋ ನೆಪದಲ್ಲಿ ಸೆಕ್ಸ್ ಗೆ ಬೇಡಿಕೆ ಇಟ್ಟ ಕಾಮುಕ ಅರೆಸ್ಟ್

ಕೊಪ್ಪಳ: ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು  ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಹನುಮನ ಹಳ್ಳಿ ನಿವಾಸಿ ಆನಂದ ರೆಡ್ಡಿ ಬಂಧಿತ ಆರೋಪಿ. ಅಮೆರಿಕದ ಮಹಿಳೆಯೊಬ್ಬರು ಈತನ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿದ್ದಾರೆ.

ಏನಿದು ಪ್ರಕರಣ?
ವಿದೇಶಿಗರು ತುಂಗಭದ್ರಾ ದಡದ ಕೊಪ್ಪಳದ ಗಂಗಾವತಿ ತಾಲೂಕಿನ ಗ್ರಾಮಗಳಾದ ವಿರುಪಾಪುರ ಗಡ್ಡಿ, ಸಣಾಪುರ್ ಮತ್ತು ಹನುಮನ ಹಳ್ಳಿಗಳಲ್ಲಿರುವ ಹೋಮ್ ಸ್ಟೇ ಗಳಲ್ಲಿ ವಾಸವಾಗುತ್ತಾರೆ. ಇದನ್ನೇ ಮೂಲ ದಂಧೆಯನ್ನಾಗಿಸಿಕೊಂಡ ಆನಂದ ರೆಡ್ಡಿ ಹನುಮನ ಹಳ್ಳಿಯಲ್ಲಿ ತನ್ನದೇ ಆದ ಸ್ಟೇ ಹೋಮ್‍ನಲ್ಲಿ ವಿದೇಶಿಗರಿಗೆ ತಂಗಲು ರೂಮ್‍ ಬಾಡಿಗೆ ನೀಡುವ ಕೆಲಸ ಮಾಡುತ್ತಾನೆ.

ಇಂತಹ ರೂಮ್ ಗಳಲ್ಲಿ ಉಳಿಯುವ ವಿದೇಶಿಗರ ಜೊತೆ ಸ್ನೇಹವನ್ನು ಬೆಳೆಸಿಕೊಳ್ಳುವ ಆರೋಪಿ ಅವರಿಗೆ ಮಸಾಜ್ ಮಾಡುವುದಾಗಿ ನಂಬಿಸಿ ಸ್ಟೇ ಹೋಮ್‍ಗೆ ಕರೆದುಕೊಂಡು ಬಂದು ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅಲ್ಲದೇ ಈ ಕುರಿತು ಸ್ಥಳೀಯರು ಆರೋಪಿಸಿದ್ದು, ಇಂತಹ ಸಾಕಷ್ಟು ಘಟನೆಗಳು ನಡೆದಿದ್ದರೂ ಯಾರು ಪೊಲೀಸರಿಗೆ ದೂರು ನೀಡಿರಲಿಲ್ಲ ಎನ್ನಲಾಗಿದೆ.

ಇತ್ತೀಚಿಗೆ ಅಮೆರಿಕದಿಂದ ಬಂದ ಮಹಿಳೆಯೊಬ್ಬರು ಆತನ ಹೋಮ್ ಸ್ಟೇ ಬಾಡಿಗೆ ಪಡೆದಿದ್ದಾರೆ. ಈ ವೇಳೆ ಮಹಿಳೆ ಗೆ ಮಸಾಜ್ ಮಾಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲದೇ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದ ವೇಳೆ ಆರೋಪಿ ಆನಂದರೆಡ್ಡಿ ಮಹಿಳೆಯನ್ನು ಹೋಮ್ ನಿಂದ ಸ್ಟೇ ಕಳುಹಿಸಿದ್ದಾನೆ. ಘಟನೆ ನಂತರ ಮಹಿಳೆ ಅಮೆರಿಕಕ್ಕೆ ತೆರಳಿದ ವೇಳೆ ತಮ್ಮ ವಿದೇಶಾಂಗ ಇಲಾಖೆಗೆ ಈ ಕುರಿತು ಇಮೇಲ್ ಮುಖಾಂತರ ದೂರು ನೀಡಿದ್ದಾರೆ. ಈ ಹಿನ್ನೆಲೆ ಪ್ರಕರಣದ ಬೆನ್ನೆತ್ತಿದ ಕೊಪ್ಪಳ ಜಿಲ್ಲೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಅನಂದರೆಡ್ಡಿಯನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *