ನಿದ್ದೆ ಮಾಡುವ ವಿದ್ಯಾರ್ಥಿನಿಯರೇ ಮುದುಕನ ಟಾರ್ಗೆಟ್ – ಖಾಸಗಿ ಭಾಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ

ಬೆಂಗಳೂರು: ವಿದ್ಯಾರ್ಥಿನಿಯರೇ ಕೆಎಸ್‍ಆರ್ ಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಹುಷಾರಾಗಿರಿ. ಯಾಕೆಂದರೆ ಬಸ್ಸಿನಲ್ಲಿ ಕಾಮುಕರ ಕಾಟ ಹೆಚ್ಚಾಗಿದ್ದು, ನಿದ್ದೆ ಮಾಡುವಾಗ ಖಾಸಗಿ ಭಾಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಕೆಎಸ್‍ಆರ್ ಟಿಸಿ ಬಸ್ಸಿನಲ್ಲಿ ಮುದುಕನೊಬ್ಬ ವಿದ್ಯಾರ್ಥಿನಿಯ ಪಕ್ಕದಲ್ಲಿಯೇ ಕುಳಿತು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಘಟನೆ ಆಗಸ್ಟ್ 4 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಸ್ ಬೆಂಗಳೂರಿನಿಂದ ಹಾಸನಕ್ಕೆ ಹೋಗುತ್ತಿತ್ತು. ಮಾರ್ಗ ಮದ್ಯೆ ಮುದುಕ ನಿದ್ದೆ ಮಾಡುವಾಗ ವಿದ್ಯಾರ್ಥಿನಿಯ ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ.

ಆರೋಪಿ ಮುದುಕ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ನಿದ್ದೆಯಲ್ಲಿದ್ದ ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿನಿ ನಿದ್ದೆಗೆ ಜಾರುತ್ತಿದ್ದಂತೆ ಆಕೆ ಪಕ್ಕದಲ್ಲಿಯೇ ಕುಳಿತಿದ್ದ ಮುದುಕ ಆಕೆ ಖಾಸಗಿ ಭಾಗವನ್ನು ಮುಟ್ಟಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಮುದುಕನ ಚಪಲಕ್ಕೆ ಸಹ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಮುದುಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಮುದುಕ ಏನು ಮಾತನಾಡದೇ ಸುಮ್ಮನೇ ಕುಳಿತಿದ್ದಾನೆ. ಈ ಎಲ್ಲ ದೃಶ್ಯಗಳನ್ನು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ.

ಪ್ರಯಾಣಿಕರು ಕಾಮುಕ ಮುದುಕನನ್ನು ಪೊಲೀಸರಿಗೆ ಒಪ್ಪಿಸಲು ಮುಂದಾಗಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯ ಭವಿಷ್ಯ ಹಾಳಾಗುತ್ತದೆ ಎಂದು ಮುದುಕನನ್ನು ಬಿಟ್ಟಿದ್ದಾರೆ. ಇದೂವರೆಗೂ ಈ ಬಗ್ಗೆ ದೂರು ದಾಖಲಾಗಿಲ್ಲ. ಇತ್ತ ಕಾಟಕೊಟ್ಟ ಕಾಮುಕನ ಬಗ್ಗೆಯೂ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *