ಬೆಂಗಳೂರು: ನಗರದಲ್ಲಿ ಓಲಾ ಕ್ಯಾಬ್ ಚಾಲಕನೋರ್ವ ನೀಲಿ ಚಿತ್ರವನ್ನು ತೋರಿಸುವ ಮೂಲಕ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿಬಂದಿದೆ.
ಯಲಹಂಕದಿಂದ ಜೆಪಿ ನಗರದವರೆಗೆ ಹೋಗಲು ಮಹಿಳೆಯೊಬ್ಬರು ಓಲಾ ಬುಕ್ ಮಾಡಿದ್ದಾರೆ. ಈ ವೇಳೆ ವಿಧಾನಸೌಧ ಸಿಗ್ನಲ್ ನಿಂದ ಕ್ವೀನ್ಸ್ ಸರ್ಕಲ್ ನ ಕಡೆಗೆ ಬರುತ್ತಿದ್ದಂತೆ ಮಾರ್ಗ ಮಧ್ಯದಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆಗೆ ನೀಲಿ ಚಿತ್ರ ಕಾಣುವಂತೆ ತನ್ನ ಮೊಬೈಲ್ ನಲ್ಲಿ ತೋರಿಸಿದ್ದಾನೆ. ಚಾಲಕನ ಈ ವರ್ತನೆಯಿಂದ ಬೆದರಿದ ಮಹಿಳೆ ಅರ್ಧ ದಾರಿಯಲ್ಲಿಯೇ ಕಾರನ್ನು ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ದಾರೆ. ಆದರೆ ಚಾಲಕ ಮಹಿಳೆಯನ್ನು ಆಕೆಯ ನಿಗದಿತ ಸ್ಥಳಕ್ಕೆ ಕರೆದೊಯ್ದು ನಿಲ್ಲಿಸಿದ್ದಾನೆ.
ಮಹಿಳೆ ಘಟನೆಯ ಒಂದು ದಿನದ ಬಳಿಕ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಐಪಿಸಿ ಸೆಕ್ಷನ್ 354(ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ?
ಗುರುವಾರ ಬೆಳಗ್ಗೆ 6.28 ಕ್ಕೆ ಯಲಹಂಕ ನ್ಯೂ ಟೌನ್ ನಿಂದ ಜೆಪಿ ನಗರದವರೆಗೆ ಓಲಾ ಕ್ಯಾಬ್ ಬುಕ್ ಮಾಡಿದ್ದೇನು. ಈ ವೇಳೆ ವಿಧಾನಸೌಧ ಸಿಗ್ನಲ್ ನಿಂದ ಕ್ವೀನ್ಸ್ ಸರ್ಕಲ್ ನ ಕಡೆಗೆ ಬರುತ್ತಿದ್ದಂತೆ ಡ್ರೈವರ್ ಮುಂಬದಿಯ ಕನ್ನಡಿಯಿಂದ ಹಿಂದೆ ಕುಳಿತ್ತಿದ್ದ ನನ್ನನ್ನು ಗಮನಿಸುತ್ತಿರುವುದು ಕಂಡುಬಂತು. ಅಷ್ಟೇ ಅಲ್ಲದೇ ಅವನು ಎಡಗೈನಿಂದ ನನಗೆ ಮೊಬೈಲ್ ಕಾಣುವಂತೆ ಹಿಡಿದುಕೊಂಡಿದ್ದನು. ಅದರಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದು, ನನಗೂ ಕಾಣುವಂತೆ ಹಿಡಿದುಕೊಂಡಿದ್ದನು. ಮತ್ತೆ ಆತ ತನ್ನನ್ನು ತಾನೇ ಮುಟ್ಟುಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ. ಅದನ್ನು ಕಂಡ ನನಗೆ ಭಯಗೊಂಡು ಕ್ಯಾಬ್ ನಿಲ್ಲಿಸುವಂತೆ ಸೂಚಿಸಿದೆ. ಅದಕ್ಕೆ ಅವನು ನಿಮ್ಮ ಇಳಿಯುವ ಸ್ಥಳ ಇನ್ನೂ ದೂರದಲ್ಲಿದೆ ಎಂದು ಹೇಳಿದ್ದಾನೆ. ಬಳಿಕ ತನ್ನ ಆಫೀಸ್ ನ ಬಳಿ ಬಂದು ಇಳಿದು ಆತನ ಬಗ್ಗೆ ಗ್ರಾಹಕ ಸೇವಾ ಕೇಂದ್ರಕ್ಕೆ ದೂರು ನೀಡಿದ್ದು, ಆತನ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಕಾನೂನು ಕ್ರಮಕೈಗೊಳ್ಳಬೇಕು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply