ಹೊನ್ನಾವರ | ಮನೆಕೆಲಸದಾಕೆ ಮುಂದೆ ಬೆತ್ತಲಾಗಿ ಓಡಾಟ, ಸೆಕ್ಸ್‌ಗೆ ಒತ್ತಾಯ – ಮಾಲೀಕನ ವಿರುದ್ಧ ಎಫ್‌ಐಆರ್‌

ಕಾರವಾರ: ಮನೆಯ ಮಾಲೀಕನೊಬ್ಬ ಕೆಲಸದಾಕೆ ಮುಂದೆ ಬೆತ್ತಲಾಗಿ ಓಡಾಡಿ, ಸೆಕ್ಸ್‌ಗೆ ಒತ್ತಾಯಿಸಿದ ಪ್ರಕರಣ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪ್ರಭಾತ್ ನಗರದಲ್ಲಿ ನಡೆದಿದೆ.

ಮಹಿಳೆ ಸೆಕ್ಸ್‌ಗೆ ಒಪ್ಪದಿದ್ದಾಗ ಆಕೆಯ ಮೇಲೆ ಕಳ್ಳತನ ಆರೋಪ ಹೊರಿಸಿದ್ದ. ಇದರಿಂದ ನೊಂದ ಮಹಿಳೆ ಮಾಲೀಕನ ಕೃತ್ಯದ ವೀಡಿಯೋ ಸಮೇತ ಪೊಲೀಸರಿಗೆ ದೂರು ನೀಡಿದ್ದಾಳೆ. ಮನೆ ಮಾಲೀಕ ಪ್ರದೀಪ್ ನಾಯ್ಕ್‌ ವಿರುದ್ಧ ಈ ಸಂಬಂಧ ಎಫ್‌ಐಆರ್‌ ದಾಖಲಾಗಿದೆ. ಇದನ್ನೂ ಓದಿ: ಸರ್ಕಾರಿ ಕೆಲಸ ಉಳಿಸಿಕೊಳ್ಳಲು ಹಸುಗೂಸನ್ನು ಕಾಡಿಗೆ ಎಸೆದ ದಂಪತಿ

ಪ್ರದೀಪ್‌ ಹೊನ್ನಾವರದಲ್ಲಿ ಏಜನ್ಸಿ ನಡೆಸುತ್ತಿದ್ದಾನೆ. ಈತನ ಪತ್ನಿ ಸಹ ಏಜೆನ್ಸಿ ನೋಡಿಕೊಳ್ಳುತ್ತಿರುವ ಕಾರಣ ಖಾಸಗಿ ಏಜನ್ಸಿಯೊಂದರ ಮೂಲಕ ಆಗಸ್ಟ್ 13 ರಂದು ಸ್ಥಳೀಯ ಮಹಿಳೆಯೊಬ್ಬಳನ್ನ ಅಡುಗೆ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದ. ಆಗಸ್ಟ್ 22 ರಂದು ಈತ ಮೊದಲ ಬಾರಿಗೆ ಕೆಲಸದಾಕೆ ಜೊತೆ ಕೆಟ್ಟದಾಗಿ ವರ್ತಿಸಿದ್ದಾನೆ. ನಂತರ ಈತ ಆಕೆಯ ಮುಂದೆ ಬೆತ್ತಲಾಗಿ ಓಡಾಡುವುದನ್ನು ಮಾಡಿದ್ದು, ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದ. ಈ ವೇಳೆ ಒಪ್ಪದೇ ಆತನ ಪತ್ನಿಗೆ ಮಾಹಿತಿ ನೀಡಿದ್ದಳು.

ಇದರಿಂದ ಪ್ರದೀಪ್‌ ನಾಯ್ಕ್ ಅಡುಗೆ ಕೆಲಸದವಳ ಮೇಲೆ ಕಳ್ಳತನದ ಆರೋಪ ಹೊರಿಸಿದ್ದ. ಹೀಗಾಗಿ ಈತನ ಪತ್ನಿಯೂ ಸುಮ್ಮನಾಗಿದ್ದಳು.‌ ಮತ್ತೆ ಆತ ಹಳೆ ಚಾಳಿಯನ್ನು ಮುಂದುವರಿಸಿದ್ದು, ನೊಂದ ಮಹಿಳೆ ವೀಡಿಯೋ ಸಮೇತ ಪೊಲೀಸರಿಗೆ ದೂರು ನೀಡಿದ್ದಾಳೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಅವಹೇಳನ – ಬೆಂಗಳೂರಿನಲ್ಲಿ ಮುನಾವರ್ ಫಾರೂಕಿ ಹತ್ಯೆಗೆ ಯತ್ನಿಸಿದ್ದ ಹಂತಕರು