ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ – ತುಮಕೂರಿನ ಅಪರಾಧಿಗೆ 12 ವರ್ಷ ಜೈಲು

court order law

ತುಮಕೂರು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ ತುಮಕೂರು ಜಿಲ್ಲಾ ಸೆಷನ್ ನ್ಯಾಯಾಲಯವು (District Session Court Tumkur) 6 ತಿಂಗಳ ಬಳಿಕ 12 ವರ್ಷ ಜೈಲು ಶಿಕ್ಷೆ ಹಾಗೂ 75 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ತುಮಕೂರಿನ ಶಿರಾ ಪೊಲೀಸ್ ಠಾಣಾ (Police Station) ವ್ಯಾಪ್ತಿಯ ಪಾರ್ಕ್ ಮೊಹಲ್ಲಾ ನಿವಾಸಿ ಜಾವದ್ ಶಿಕ್ಷೆಗೆ ಗುರಿಯಾದ ದೋಷಿ. ಇದನ್ನೂ ಓದಿ: ವೀರಶೈವರು ನಮ್ಮಲ್ಲಿ ದಲಿತರ ರಕ್ತ ಹರಿಯುತ್ತಿದೆ ಎಂದು ಹೇಳಲಿ: ಜ್ಞಾನ ಪ್ರಕಾಶ ಸ್ವಾಮೀಜಿ

ಏನಿದು ಪ್ರಕರಣ?
ಕಳೆದ ಮೇ 28 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಶಿರಾ ಪೊಲೀಸ್ ಠಾಣೆ ವ್ಯಾಪ್ತಿಯ ಪಾರ್ಕ್ ಮೊಹಲ್ಲಾದ (Park Mohalla) ಪೋತರಾಜನ ಗದ್ದುಗೆ ಬಳಿ 7 ಮತ್ತು 9 ವರ್ಷದ ಬಾಲಕಿಯರು ಆಟವಾಡುತ್ತಿದ್ದರು. ಅಲ್ಲಿಗೆ ಬಂದ ಜಾವದ್ ಚಾಕೊಲೇಟ್ ಕೊಡಿಸುವುದಾಗಿ ಪುಸಲಾಯಿಸಿ ಇಬ್ಬರನ್ನೂ ಪಾರ್ಕ್ ಮೊಹಲ್ಲಾಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಮಕ್ಕಳು ಅಳುತ್ತಿರುವುದು ಕಂಡು ತಾಯಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ನೊಂದ ಬಾಲಕಿಯರ ತಾಯಿ ಶಿರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಂದಿನ ಪಿಎಸ್‌ಐ (PSI) ಲಕ್ಷ್ಮೀನಾರಾಯಣ್ ಪ್ರಕರಣ ದಾಖಲಿಸಿ ಆರೋಪಿಯನ್ನ ಬಂಧಿಸಿದ್ದರು. ನಂತರ ತನಿಖಾಧಿಕಾರಿಗಳಾದ ಪೊಲೀಸ್ ಇನ್ಸ್ಪೆಕ್ಟರ್ ವಿ.ಲಕ್ಷ್ಮಯ್ಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.‌ ಇದನ್ನೂ ಓದಿ: ಮಕ್ಕಳನ್ನು 1ನೇ ಕ್ಲಾಸಿಗೆ ಸೇರಿಸಲು 6 ವರ್ಷ ಕಡ್ಡಾಯ – ಸರ್ಕಾರದಿಂದ ಅಧಿಕೃತ ಆದೇಶ

ಜಿಲ್ಲಾ ಸೆಷನ್ಸ್ ಪೋಕ್ಸೋ ನ್ಯಾಯಾಲಯದಲ್ಲಿ (District Session POCSO Speical Court) ಪ್ರಕರಣದ ವಿಚಾರಣೆ ನಡೆದಿದ್ದು, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಜಾವದ್’ಗೆ ಕಲಂ 363 ಐಪಿಸಿಗೆ (IPC) 5 ವರ್ಷ ಶಿಕ್ಷೆ, 25 ಸಾವಿರ ರೂ. ದಂಡ ಹಾಗೂ ಕಲಂ 9(M) ಅಡಿ 7 ವರ್ಷ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಸೆಷನ್ಸ್ ಪೋಕ್ಸೋ ವಿಶೇಷ ನ್ಯಾಯಾಧೀಶರಾದ ಪಿ.ಸಂಧ್ಯಾ ರಾವ್ ತೀರ್ಪು ನೀಡಿದ್ದಾರೆ.

ಸಂತ್ರಸ್ತರ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಎಸ್.ಆಶಾ ವಾದ ಮಂಡಿಸಿದ್ದರು. ಪ್ರಕರಣ ನಡೆದು 6 ತಿಂಗಳ ನಂತರವಾದ್ರೂ ತೀರ್ಪು ಪ್ರಕಟಿಸುವ ಮೂಲಕ ನ್ಯಾಯಾಲಯವು ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಕಿಡಿಗೇಡಿಗಳಿಗೆ ಕಠಿಣ ಎಚ್ಚರಿಕೆ ರವಾನಿಸಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *