ಬಿಜೆಪಿ ಕಾರ್ಯಕರ್ತರ ವಾಟ್ಸಪ್ ಗ್ರೂಪಿನಲ್ಲಿ ಸೆಕ್ಸ್ ವಿಡಿಯೋ ಶೇರ್

ಕಾರವಾರ: ಶಿಸ್ತಿನ ಪಕ್ಷ ಎಂದೇ ಹೆಸರಾಗಿರುವ ಬಿಜೆಪಿ ಕಾರ್ಯಕರ್ತರ ಕಾಮಸೂತ್ರದ ಕಥೆಯನ್ನು ಹಂಚತೊಡಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಕಾರ್ಯಕರ್ತರಿಗಾಗಿ ಪಕ್ಷದ ಚಟುವಟಿಕೆ ಹಾಗೂ ಮಾಹಿತಿ ಹಂಚಿಕೊಳ್ಳಲು ವಾಟ್ಸಪ್ ಮೂಲಕ ಬಿಜೆಪಿ ಎನ್ನುವ ಗ್ರೂಪ್ ಮಾಡಲಾಗಿತ್ತು. ಈ ಗ್ರೂಪಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ ನಾಯ್ಕ, ಹಾಲಿ ಶಾಸಕರುಗಳಾದ ಭಟ್ಕಳ ಕ್ಷೇತ್ರದ ಸುನೀಲ್ ನಾಯ್ಕ, ಕಾರವಾರ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಪಂಚಾಯ್ತಿ ಸದಸ್ಯೆ ಗಾಯಿತ್ರಿ ಗೌಡ ಸೇರಿದಂತೆ ಬಿಜೆಪಿಯ ಪ್ರಮುಖರು ಇದ್ದಾರೆ. ಇದನ್ನೂ ಓದಿ: ‘ಕಾಂಗ್ರೆಸ್ ವಾಟ್ಸಪ್ ಗ್ರೂಪ್’ನಲ್ಲಿ ಬೆತ್ತಲೆ ಫೋಟೋ ಅಪ್ಲೋಡ್ ಮಾಡಿಕೊಂಡ ಮಾಜಿ ಪುರಸಭೆ ಅಧ್ಯಕ್ಷ

ಗ್ರೂಪ್ ನಲ್ಲಿ ಪಕ್ಷದ ಚಟುವಟಿಕೆ ಕುರಿತು ಚರ್ಚೆ ಅಥವಾ ಮಾಹಿತಿ ಹಂಚಿಕೆ ಬದಲು ಈಗ ಸೆಕ್ಸ್ ವಿಡಿಯೋಗಳನ್ನು ಕಾರ್ಯಕರ್ತರು ಹಂಚಿಕೆ ಮಾಡುತ್ತಿದ್ದಾರೆ. ಹೀಗೆ ಪಕ್ಷದ ವಾಟ್ಸಪ್ ಗ್ರೂಪ್ ನಲ್ಲಿ ಕಾರ್ಯಕರ್ತನೊಬ್ಬ ಸೆಕ್ಸ್ ವಿಡಿಯೋ ಶೇರ್ ಮಾಡಿದ್ದಾನೆ.

ಗ್ರೂಪಿನಲ್ಲಿ ಸೆಕ್ಸ್ ವಿಡಿಯೋ ರಾರಾಜಿಸಿದರೂ ಪಕ್ಷದ ದೊಡ್ಡ ಮುಖಂಡರೆನಿಸಿದವರು ಮಾತ್ರ ಯಾವುದೇ ಪ್ರತಿಕ್ರಿಯೆಯನ್ನು ನೀಡುವುದು ಇರಲಿ, ಇಂತಹ ಮನಸ್ಥಿತಿ ಇರುವ ವ್ಯಕ್ತಿಗಳನ್ನು ಗ್ರೂಪ್ ನಿಂದ ರಿಮೂವ್ ಕೂಡ ಮಾಡಿಲ್ಲ. ಇದರಿಂದ ವಾಟ್ಸಪ್ ಗ್ರೂಪಿನಲ್ಲಿರುವ  ಪಕ್ಷದ ಇತರರಿಗೆ ಮುಜುಗರ ತರಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *