ಬೆಂಗಳೂರು: ಕಿಚ್ಚ ಸುದೀಪ್ ನಟಿಸುತ್ತಿರುವ ಪೈಲ್ವಾನ್ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗ ಈ ಚಿತ್ರದಲ್ಲಿ ಲೆಜೆಂಡರಿ ಆಕ್ಟರ್ ಗಳಾದ ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ವಜ್ರಮುನಿಯಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೈಲ್ವಾನ್ ಸೆಟ್‍ನಲ್ಲಿ ಡಾ. ರಾಜ್‍ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ರವಿಚಂದ್ರನ್, ವಜ್ರಮುನಿ ಸೇರಿದಂತೆ ಸ್ಯಾಂಡಲ್‍ವುಡ್‍ನ ಹಲವು ಸ್ಟಾರ್ ಗಳು ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಎಲ್ಲರಿಗೂ ಕುತೂಹಲ ಮೂಡಿಸಿದೆ. ಸಿನಿಮಾ ಸೆಟ್‍ನಲ್ಲಿ ನಟರ ಫೋಟೋಗಳು ರಾರಾಜಿಸ್ತಿರುವುದಕ್ಕೆ ಕಾರಣವೇನು ಎನ್ನುವುದರ ಗುಟ್ಟು ಇನ್ನೂ ರಟ್ಟಾಗಿಲ್ಲ.
ಚಿತ್ರದ ಶೂಟಿಂಗ್ ಚೆನ್ನೈನಲ್ಲಿ ನಡೆದಿತ್ತು. ಚಿತ್ರೀಕರಣ ಮುಗಿದ ಬಳಿಕ ಬೆಂಗಳೂರಿಗೆ ಹೊರಡುವ ಮುನ್ನ ಎಲ್ಲ ನಟರು ಮತ್ತು ತಂತ್ರಜ್ಞರು ಸೆಟ್‍ನಲ್ಲಿ ಗ್ರೂಪ್ ಫೋಟೋ ತೆಗೆಸಿಕೊಂಡಿದ್ದಾರೆ. ಫೋಟೋದ ಹಿಂದೆ ಎಲ್ಲ ಸ್ಯಾಂಡಲ್‍ವುಡ್‍ನ ಲೆಜೆಂಡರಿ ಆ್ಯಕ್ಟರ್ ಗಳ ಭಾವಚಿತ್ರಗಳಿರೋದನ್ನು ಕಾಣಬಹುದಾಗಿದೆ. ಪೈಲ್ವಾನ್ ಪೋಸ್ ಕೊಟ್ಟು ಫೋಟೊ ಕ್ಲಿಕ್ಕಿಸಿಕೊಂಡು ಆ ಫೋಟೋಗಳನ್ನು ಸುದೀಪ್ ಸೋಶಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಶಂಕರ್ ನಾಗ್ ಕಾಲೋನಿ ಅಂತಿರುವ ಫೋಟೋವೊಂದನ್ನ ಕಿಚ್ಚ ಅಪ್ಲೋಡ್ ಮಾಡಿದ್ದರು. ಇದೀಗ ಪೈಲ್ವಾನ್ ಸಿಗ್ನೇಚರ್ ಇರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿರುವ ಈ ಫೋಟೋಗಳು ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿವೆ.
ಹೆಬ್ಬುಲಿ ಚಿತ್ರವನ್ನು ನಿರ್ದೇಶನ ಮಾಡಿದ ಕೃಷ್ಣ ಅವರು ಪೈಲ್ವಾನ್ ಸಿನಿಮಾ ಕೂಡ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಆರ್ ಆರ್ ಆರ್ ಮೋಷನ್ಸ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ.
Bring out the #phailwaan in u. @krisshdop @ArjunjanyaAJ @SunielVShetty @Kabirduhansingh pic.twitter.com/PsxB7UF4Zw
— Kichcha Sudeepa (@KicchaSudeep) June 2, 2018

Leave a Reply