1 ತಿಂಗಳೊಳಗೆ ಹಣ ಮರಳಿಸಿ – ದ್ವಾರಕೀಶ್‍ಗೆ ಕೋರ್ಟ್ ಸೂಚನೆ

ಬೆಂಗಳೂರು: ಒಂದು ತಿಂಗಳ ಒಳಗೆ ಪಡೆದಿದ್ದ ಸಾಲವನ್ನು ತೀರಿಸುವಂತೆ ಸೆಷನ್ಸ್ ಕೋರ್ಟ್ ಸ್ಯಾಂಡಲ್‍ವುಡ್ ಹಿರಿಯ ನಟ ದ್ವಾರಕೀಶ್ ಅವರಿಗೆ ಸೂಚನೆ ನೀಡಿದೆ.

2013ರಲ್ಲಿ ಚಾರುಲತಾ ಸಿನಿಮಾಕ್ಕಾಗಿ ದ್ವಾರಕೀಶ್ ಅವರು ಕೆಸಿಎನ್ ಚಂದ್ರಶೇಖರ್‌ರಿಂದ ಸಾಲ ಪಡೆದಿದ್ದರು. ದ್ವಾರಕೀಶ್ ಸಂಬಂಧಿ ಸಂಜೀವ್ ಮಧ್ಯಸ್ಥಿಕೆ ವಹಿಸಿ ಕೆಸಿಎನ್ ಚಂದ್ರಶೇಖರ್‌ರಿಂದ ಹಣ ಕೊಡಿಸಿದ್ದರು. ಆದರೆ ಸಾಲದ ಹಣ ವಾಪಸ್ ನೀಡದೇ ಸತಾಯಿಸಿದ್ದ ದ್ವಾರಕೀಶ್ ಸಾಲಕೊಟ್ಟವರ ವಿರುದ್ಧವೇ ಕೊಲೆ ಯತ್ನ ಕೇಸ್ ಹಾಕಿದ್ದರು. ಇದನ್ನೂ ಓದಿ: ಅರಿಶಿನ ಶಾಸ್ತ್ರ ಸಂಭ್ರಮದ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್ 

50 ಲಕ್ಷ ರೂಪಾಯಿ ಸಾಲ ಪಡೆಯುವ ವೇಳೆಯಲ್ಲಿ ಚೆಕ್ ನೀಡಿದ್ದ ದ್ವಾರಕೀಶ್, ನಂತರ ತಾನು ಯಾವುದೇ ಚೆಕ್ ನೀಡಿಲ್ಲ, ಸಹಿ ನನ್ನದಲ್ಲ ಎಂದು ಕೋರ್ಟ್‍ನಲ್ಲಿ ವಾದಿಸಿದ್ದರು. ಆದರೆ ಫೋರೆನ್ಸಿಕ್ ಲ್ಯಾಬ್ ನಲ್ಲಿ ಸಹಿ ದ್ವಾರಕೀಶ್ ಅವರದ್ದೇ ಎಂದು ಸಾಬೀತಾಗಿತ್ತು. ಬಳಿಕ 2019ರಲ್ಲಿ ಸ್ಮಾಲ್ ಕಾಸಸ್ ಕೋರ್ಟ್ 52 ಲಕ್ಷ ಹಣ ಹಿಂದಿರುಗಿಸುವಂತೆ ದ್ವಾರಕೀಶ್‍ಗೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ದ್ವಾರಕೀಶ್ ಸೆಷನ್ಸ್ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: ಐಟಂ ಸಾಂಗ್ ಕ್ಲಿಕ್ -‘ಪುಷ್ಪ’ದಲ್ಲಿ ಸಮಂತಾ ಫುಲ್ ಮಿಂಚಿಂಗ್

ಇದೀಗ ಕೆಳ ನ್ಯಾಯಾಲಯದ ಆದೇಶವನ್ನ ಸೆಷನ್ಸ್ ಕೋರ್ಟ್ ಎತ್ತಿಹಿಡಿದಿದ್ದು ದ್ವಾರಕೀಶ್‍ಗೆ ಹಿನ್ನೆಡೆ ಆಗಿದ್ದು ಒಂದು ತಿಂಗಳಲ್ಲಿ 52 ಲಕ್ಷ ರೂಪಾಯಿ ಹಣ ಹಿಂದಿರುಗಿಸುವಂತೆ ಕೋರ್ಟ್ ಆದೇಶ ನೀಡಿದೆ.

Comments

Leave a Reply

Your email address will not be published. Required fields are marked *