ಸಾಯೋಕಿಂತ ಮುಂಚೆ ನನ್ನ ಅಪ್ಪನ ನೋಡ್ಬೇಕು: ವೈಷ್ಣವಿ

ಬೆಂಗಳೂರು: ಬಿಗ್‍ಬಾಸ್ ಮಿನಿ ಸೀಸನ್‍ನಲ್ಲಿ ಸ್ಪರ್ಧಿಯಾಗಿರುವ ಧಾರಾವಾಹಿ ನಟಿ ವೈಷ್ಣವಿ ತಮ್ಮ ತಂದೆಯನ್ನು ಒಮ್ಮೆ ನೋಡಬೇಕು ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಮಿಥುನ ರಾಶಿ ಸೀರಿಯಲ್ ಮೂಲಕ ಫೇಮಸ್ ಆದ ನಟಿ ವೈಷ್ಣವಿ ಅವರು ಇತ್ತೀಚೆಗೆ ದೊಡ್ಮನೆಯಲ್ಲಿ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಮ್ಮ ಮನದಾಳದ ನೋವನ್ನು ಎಲ್ಲರ ಎದುರು ಹೇಳಿಕೊಂಡಿದ್ದಾರೆ. ವೈಷ್ಣವಿ ಮಾತನಾಡಿರುವುದು ಹೃದಯಸ್ಪರ್ಶಿ ಆಗಿದೆ. ಅದನ್ನು ಕೇಳಿ ಬಿಗ್‍ಬಾಸ್ ಮನೆಯ ಇನ್ನುಳಿದ ಸದಸ್ಯರು ಕೂಡ ಕಣ್ಣೀರು ಸುರಿಸಿದ್ದಾರೆ. ಅಪ್ಪನನ್ನು ನೋಡಬೇಕು ಎಂದು ಕಣ್ಣೀರು ಹಾಕುತ್ತೀರುವ ದೃಶ್ಯ ವೀಕ್ಷಕರ ಕಣ್ಣು ಒದ್ದೆ ಮಾಡುವಂತಿದೆ.

ನನಗೆ ಅಪ್ಪನ ಹೆಸರು ಗೊತ್ತಾಗಿದ್ದು 10ನೇ ಕ್ಲಾಸ್‍ನಲ್ಲಿ. ನನಗೆ ಅಪ್ಪ ಇದ್ದಾರೆ ಎನಿಸುತ್ತದೆ. ಅವರು ಸತ್ತಿಲ್ಲ. ಅವರು ನಮ್ಮ ಜೊತೆ ಕೂಡ ಇಲ್ಲ. ನಾನು ಅವರನ್ನು ನೋಡಿಯೇ ಇಲ್ಲ. ಇವಳಿಗೆ ಇವರ ಅಪ್ಪನ ಹೆಸರೇ ಗೊತ್ತಿಲ್ಲ ಎಂದು ನನ್ನ ಎದುರಿಗೇ ಜನರು ಆಡಿಕೊಳ್ಳುತ್ತಿದ್ದರು. ನಮ್ಮ ಅಪ್ಪ ಸಾಯುವುದಕ್ಕಿಂತ ಮುಂಚೆ ನಾನು ಅವರನ್ನ ನೋಡಬೇಕು. ಒಂದೇ ಒಂದು ಬಾರಿ ಅವರನ್ನು ನಾನು ಅಪ್ಪ ಎಂದು ಕರೆಯಬೇಕು ಅಂತ ತುಂಬ ಆಸೆ ಇದೆ ಎನ್ನುತ್ತ ವೈಷ್ಣವಿ ಕಣ್ಣೀರು ಸುರಿಸಿದ್ದಾರೆ. ಇದನ್ನೂ ಓದಿ: ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ?: ಶ್ರುತಿ

ತೆರೆಮೇಲೆ ಖುಷಿಖುಷಿಯಾಗಿ ಮನರಂಜಿಸುವ ನಟ-ನಟಿಯರ ರಿಯಲ್ ಲೈಫ್ ಬಗ್ಗೆ ಅಭಿಮಾನಿಗಳಿಗೆ ಹೆಚ್ಚೇನೂ ಗೊತ್ತಿರುವುದಿಲ್ಲ. ಸೆಲೆಬ್ರಿಟಿಗಳ ಬದುಕಿನಲ್ಲಿಯೂ ಹೇಳಿಕೊಳ್ಳಲಾಗದಂತಹ ನೋವಿನ ಘಟನೆಗಳು ಇರುತ್ತವೆ. ಬಿಗ್‍ಬಾಸ್ ಮಿನಿ ಸೀಸನ್‍ನಲ್ಲಿ ಭಾಗವಹಿಸಿರುವ ಕೆಲವು ಕಲಾವಿದರು ತಮ್ಮ ಬದುಕಿನ ಅಂತಹ ಕೆಲವು ನೋವುಗಳನ್ನು ಪ್ರೇಕ್ಷಕರ ಮುಂದೆ ಹಂಚಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *