ಹೃದಯ ಕದ್ದವನ ಕೊನೆಯ ಹೆಸ್ರು ಕದಿಯಲು ಹೊರಟ ಕಿರುತೆರೆ ನಟಿ

ಬೆಂಗಳೂರು: ಖಾಸಗಿ ಚಾನೆಲ್ಲೊಂದರ ಕಿರುತೆರೆ ನಟಿ ರಾಧಿಕಾ ರಾವ್ ಅವರು ತಮ್ಮ ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಮೂಲತಃ ಮಂಗಳೂರಿನವರಾಗಿರುವ ರಾಧಿಕಾ ಹಾಗೂ ಆಕರ್ಷ್ ಭಟ್, ನಿಶ್ಚಿತಾರ್ಥ ಕಾರ್ಯಕ್ರಮ ಭಾನುವಾರ ಅಂದರೆ ಅಕ್ಟೋಬರ್ 13 ರಂದು ನಡೆದಿದೆ. ಎಂಜಿನಿಯರಿಂಗ್ ಓದಿರುವ ಆಕರ್ಷ್ ಭಟ್ ಇಂಟರ್ ನ್ಯಾಷನಲ್ ಮ್ಯಾಜಿಷಿಯನ್ ಮತ್ತು ಮೈಂಡ್ ರೀಡರ್ ಆಗಿದ್ದಾರೆ. ಇವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಕಳೆದ ಮಾರ್ಚ್ ನಲ್ಲಿ ರಾಧಿಕಾಗೆ ಅವರ ಗೆಳತಿಯ ಮೂಲಕ ಆಕರ್ಷ್ ಪರಿಚಯ ಆಗಿದೆ. ಪರಿಚಯ ಸ್ನೇಹವಾಗಿ ಇಬ್ಬರೂ ಆಗಾಗ ಭೇಟಿ ಮಾಡುತ್ತಿದ್ದರು. ಸ್ನೇಹ ಪ್ರೀತಿಯಾಗಿ ಆಕರ್ಷ್, ರಾಧಾ ಅವರಿಗೆ ಪ್ರಪೋಸ್ ಮಾಡಿದ್ದಾರೆ. ರಾಧಿಕಾ ಕೂಡ ಸಂತಸದಿಂದಲೇ ಆಕರ್ಷ್ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ. ನಂತರ ಇಬ್ಬರೂ ತಮ್ಮ ತಮ್ಮ ಮನೆಯಲ್ಲಿ ಪ್ರೀತಿಯ ವಿಚಾರವನ್ನು ತಿಳಿಸಿದ್ದಾರೆ. ಬಳಿಕ ಎರಡೂ ಕುಟುಂಬದವರು ಒಪ್ಪಿ ಎಂಗೇಜ್‍ಮೆಂಟ್ ಮಾಡಿದ್ದಾರೆ.

ರಾಧಿಕಾ ತನ್ನ ನಿಶ್ಚಿತಾರ್ಥದ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, “ಇವನು ನನ್ನ ಹೃದಯವನ್ನು ಕದ್ದನು. ಹಾಗಾಗಿ ನಾನು ಅವನ ಕೊನೆಯ ಹೆಸರನ್ನು ಕದಿಯಲು ಹೋಗುತ್ತಿದ್ದೇನೆ. ಈ ನಿಶ್ಚಿತಾರ್ಥದಿಂದ ನಾವಿಬ್ಬರು ಜೀವನದಾದ್ಯಂತ ಒಟ್ಟಾಗಿ ಇರುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ” ಎಂದು ಬರೆದುಕೊಂಡಿದ್ದಾರೆ. ನಿಶ್ಚಿತಾರ್ಥದ ಫೋಟೋವನ್ನು ಪೋಸ್ಟ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಶುಭಾಶಯವನ್ನು ತಿಳಿಸುತ್ತಿದ್ದಾರೆ.

ರಾಧಿಕಾ ರಾವ್ ಈ ಹಿಂದೆ ‘ಮಂಗಳೂರು ಹುಡ್ಗಿ, ಹುಬ್ಬಳ್ಳಿ ಹುಡ್ಗ’ ಸೀರಿಯಲ್‍ನಲ್ಲಿ ಅಭಿನಯಿಸುತ್ತಿದ್ದರು. ಈ ಸೀರಿಯಲ್‍ನಲ್ಲಿ ಅಮೂಲ್ಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರಿಂದ ಈಕೆ ಅಮುಲ್ಯಾ ಎಂದೇ ಪ್ರೇಕ್ಷಕರಿಗೆ ಚಿರಪರಿಚಿತಾಗಿದ್ದರು. ಈಗ ‘ರಾಧಾ ಕಲ್ಯಾಣ’ ಧಾರವಾಹಿಯಲ್ಲಿ ರಾಧಾ ಪಾತ್ರಧಾರಿಯಾಗಿ ಜನರ ಮನ ಸೆಳೆದಿದ್ದಾರೆ.

Comments

Leave a Reply

Your email address will not be published. Required fields are marked *