ಪ್ರಿಯಕರನೊಂದಿಗೆ 7 ಹೆಜ್ಜೆ ಇಡಲು ಸಿದ್ಧರಾದ ‘ಕುಲವಧು’ ಧನ್ಯಾ

ಬೆಂಗಳೂರು: ಇತ್ತೀಚೆಗೆ ಕಿರುತೆರೆಯ ನಟಿಯರು ದಾಪಂತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ‘ಕುಲವಧು’ ಧಾರಾವಾಹಿಯ ಪಾತ್ರಧಾರಿ ವಚನ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಇದೇ ಸೀರಿಯಲ್‍ನ ಧನ್ಯಾ ಕೂಡ ಸಪ್ತಪದಿ ತುಳಿಯಲು ತಯಾರಾಗಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕುಲವಧು’ ಧಾರಾವಾಹಿಯಲ್ಲಿ ಧನ್ಯಾ ಪಾತ್ರಧಾರಿ ದೀಪಿಕಾ ಪ್ರೇಕ್ಷಕರ ಮನಗೆದ್ದಿದ್ದಾರೆ. ಇದೀಗ ತಾವೂ ಪ್ರೀತಿಸುತ್ತಿರುವ ಹುಡುಗ ಬಗ್ಗೆ ಇನ್ಸ್ ಸ್ಟಾಗ್ರಾಂನಲ್ಲಿ ಫೋಟೋ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.

https://www.instagram.com/p/Bw_zumDAKvE/

ದೀಪಿಕಾ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿರುವ ಅಕ್ಕುಅಕರ್ಶ್ ಅವರನ್ನು ಬಹಳ ದಿನದಿಂದಲೂ ಪ್ರೀತಿ ಮಾಡುತ್ತಿದ್ದಾರೆ. ಈ ಬಗ್ಗೆ ದೀಪಿಕಾ “ಇದು ನಮ್ಮಿಬ್ಬರು ಮೊದಲು ಫೋಟೋವಾಗಿದ್ದು, ಇವರ ಜೊತೆ ಏಳು ಜನ್ಮದಲ್ಲೂ ಏಳು ಹೆಜ್ಜೆಗಳನ್ನು ಇಡುತ್ತೇನೆ” ಎಂದು ಬರೆದು ತಮ್ಮ ಮತ್ತು ಅಕ್ಕು ಅಕರ್ಶ್ ಪೇಂಟಿಂಗ್ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.

ಇನ್ನೊಂದು ಫೋಟೋ ಪೋಸ್ಟ್ ಮಾಡಿ ಅದರಲ್ಲಿ “ನೀನು ನನಗೆ ಪ್ರತಿದಿನದ ಸೂರ್ಯ ಇದ್ದಂತೆ. ನನ್ನ ಹೃದಯ ನಿನಗೆ ಸೋತಿದೆ” ಎಂದು ಹೇಳಿಕೊಂಡಿದ್ದಾರೆ. ಸದ್ಯಕ್ಕೆ ದೀಪಿಕಾ ‘ಕುಲವಧು’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

https://www.instagram.com/p/BxAp0MuAF5V/

Comments

Leave a Reply

Your email address will not be published. Required fields are marked *