ಮಗಳಿಗೆ ನಾಮಕರಣ ಮಾಡಿದ ಕಿರುತೆರೆ ನಟಿ ಅಮೃತಾ ರಾಮಮೂರ್ತಿ

ಬೆಂಗಳೂರು: ಕಿರುತೆರೆ ನಟಿ ಅಮೃತಾ ರಾಮಮೂರ್ತಿ ತಮ್ಮ ಮಗಳಿಗೆ ನಾಮಕರಣ ಮಾಡಿದ್ದಾರೆ. ಈ ವಿಚಾರವನ್ನು ಅಮೃತಾ ಮತ್ತು ಪತಿ ರಾಘವೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ದೃತಿ ಎಂದು ನಾಮಕರಣ ಮಾಡಿದ್ದೇವೆ. ದೃತಿ ಪುಟ್ಟಿಯೆಂದು ಕರೆಯುತ್ತೇವೆ ಎಂದು ಬರೆದುಕೊಂಡಿದ್ದಾರೆ. ಅಪ್ಪು ಸರ್ ವಲ್‌ ಯೂ, ನಮ್ಮ ಜೀವನದ ಬೆಳಕು ನೀವು ಎಂದು ಬರೆದುಕೊಂಡಿದ್ದಾರೆ. ಅಮೃತಾ ರಾಮಮೂರ್ತಿ ಮಗಳ ಹೆಸರಿನ ಅನಾವರಣದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದಾರೆ. ಈ ವೀಡಿಯೋಗೆ ಪುನೀತ್ ರಾಜ್‍ಕುಮಾರ್ ಅಭಿನಯದ ಸಿನಿಮಾ ಸಾಂಗ್‍ನ ಮ್ಯೂಸಿಕ್‍ನ್ನು ಬಳಸಿರುವುದು ವಿಶೇಷವಾಗಿದೆ.

ಮಗು ಜನಿಸಿದಾಗ ಪಂಪತಿ ದೇವತೆಯ ಆಗಮನವಾಗಿದೆ ಎಂದು ಇನ್‍ಸ್ಡಾಗ್ರಾಮ್‍ನಲ್ಲಿ ಬರೆದುಕೊಂಡು ಹೆಣ್ಣು ಮಗುವಿಗೆ ಪೋಷಕರಾಗಿರುವ ಕುರಿತಾಗಿ 5 ತಿಂಗಳ ಹಿಂದೆಯೇ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದರು. ಇದೀಗ ಮಗಳಿಗೆ ನಾಮಕರಣ ಮಾಡಿರುವ ಕುರಿತಾಗಿ ತಿಳಿಸಿದ್ದಾರೆ. ಮಗಳ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಲವು ಬಾರಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇಲ್ಲಿವರೆಗೂ ದೃತಿ ಮುಖದ ಪರಿಚಯವನ್ನು ಮಾಡಿಕೊಟ್ಟಿಲ್ಲ. ಇದನ್ನೂ ಓದಿ: ಹೆಣ್ಣು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಅಮೃತಾ ರಾಮಮೂರ್ತಿ

ಮಿಸ್ಟರ್ & ಮಿಸಸ್ ರಂಗೇಗೌಡ ಧಾರಾವಾಹಿಯಲ್ಲಿ ರಾಘವೇಂದ್ರ ಹಾಗೂ ಅಮೃತಾ ಒಟ್ಟಾಗಿ ನಟಿಸಿದ್ದರು. ಆ ಧಾರಾವಾಹಿಯಲ್ಲಿ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದ ಅವರು ನಿಜ ಜೀವನದಲ್ಲಿಯೂ ಕೂಡ ಸತಿ-ಪತಿಗಳಾದರು. 20019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದಂಪತಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ದಾರಾವಾಹಿಗಳ ಮೂಲಕವಾಗಿ ಜನಮನ್ನಣೆಗಳಿಸಿಕೊಂಡಿದ್ದರು. ಅಮೃತಾ ರಾಮಮೂರ್ತಿ ಸದ್ಯ ಯಾವುದೇ ಸಿರಿಯಲ್‍ನಲ್ಲಿಯೂ ಕಾಣಿಸಿಕೊಂಡಿಲ್ಲ. ಮಗಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಇವರ ಪತಿ ರಾಘವೇಂದ್ರ ಅವರು ಸೀರಿಯಲ್‍ನಲ್ಲಿ ನಟಿಸುತ್ತಿದ್ದಾರೆ. ತಮ್ಮದೇ ಆಗಿರುವ ವಿಶೇಷ ಶೈಲಿಯ ನಟನೇಯ ಮೂಲಕವಾಗಿ ಅಭಿಮಾನಿಗಳ ಮನಸ್ಸಿಗೆ ಹತ್ತಿರವಾಗಿದ್ದಾರೆ. ಇದನ್ನೂ ಓದಿ: ಕಿರುತೆರೆ ನಟಿ ಅಮೃತಾ ರಾಮಮೂರ್ತಿಗೆ ಸೀಮಂತದ ಸಂಭ್ರಮ

 

Comments

Leave a Reply

Your email address will not be published. Required fields are marked *