636 ದಿನಗಳ ಬಳಿಕ ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಲಭ್ಯ

ನವದೆಹಲಿ: ಬರೋಬ್ಬರಿ 636 ದಿನಗಳ ಬಳಿಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ವಿಡಿಯೋ ಬಿಡುಗಡೆಯಾಗಿದೆ.

ಈ ಕುರಿತ ವಿಡಿಯೋವನ್ನು ಎರಡು ಖಾಸಗಿ ವಾಹಿನಿಗಳು ಪ್ರಸಾರ ಮಾಡಿದ್ದು, ವಿಡಿಯೋದಲ್ಲಿ ದಾಳಿ ನಡೆದ ಸಮಯ ದಿನಾಂಕದ ಸಮೇತ ದೃಶ್ಯಗಳು ಲಭ್ಯವಾಗಿದೆ. ಯುಎವಿ ಮತ್ತು ಸೈನಿಕರು ಧರಿಸಿದ್ದ ಹೇಡ್ ಮೌಂಟೇನ್ ಕ್ಯಾಮೆರಾದಲ್ಲಿ ಕಾರ್ಯಾಚರಣೆಯನ್ನು ಸೆರೆ ಹಿಡಿಯಲಾಗಿದೆ.

ಮೊದಲು ವಿಡಿಯೋದಲ್ಲಿ ಸೈನಿಕರ ಮೊದಲ ಟಾರ್ಗೆಟ್ ಆಗಿದ್ದ ಉಗ್ರಗಾಮಿಗಳ ಕ್ಯಾಪ್‍ಗಳು ಸೆರೆಯಾಗಿದ್ದು, ಬಳಿಕ ಯೋಧರು ಅವುಗಳ ಮೇಲೆ ದಾಳಿ ನಡೆಸುವ ಸಂದರ್ಭದ ದೃಶ್ಯಗಳು ಲಭಿಸಿದೆ. ಬೆಳಗ್ಗೆ 6.16 ಸಮಯಕ್ಕೆ ಎರಡನೇ ಟಾರ್ಗೆಟ್ ಮೇಲೆ ದಾಳಿ ನಡೆಸಲಾಗಿದೆ. ಮೂರನೇ ಟಾರ್ಗೆಟ್ ಬಂಕರ್ ಆಗಿದ್ದು, ಕೊನೆಯ ಫ್ರೇಮ್ ನಲ್ಲಿ ಉಗ್ರರ ಬಂಕರ್ ನಾಶವಾಗುವ ದೃಶ್ಯಗಳನ್ನು ಕಾಣಬಹುದಾಗಿದೆ.

2016ರ ಸೆಪ್ಟೆಂಬರ್ 28, 29ರ ನಸುಕಿನ ಜಾವ ವೇಳೆ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಪ್ರವೇಶಿಸಿ ಸರ್ಜಿಕಲ್ ದಾಳಿ ನಡೆಸಿ 20ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿತ್ತು. ಈ ಕಾರ್ಯಾಚರಣೆ ಬಳಿಕ ಸುದ್ದಿಗೋಷ್ಠಿ ನಡೆಸಿ ಡಿಜಿಎಂಒ ಕಾರ್ಯಾಚರಣೆಯ ವಿವರವನ್ನು ನೀಡಿದ್ದರು.

Comments

Leave a Reply

Your email address will not be published. Required fields are marked *