49th Century: ಕಿಂಗ್ ಕೊಹ್ಲಿ ಬರ್ತ್ ಡೇ ಶತಕ – ಶುಭಾಶಯಗಳ ಸುರಿಮಳೆ!

– ಸಚಿನ್, ಸೆಹ್ವಾಗ್, ಐಸಿಸಿಯಿಂದ ಶುಭಾಶಯ

ಕೋಲ್ಕತ್ತಾ: ಬರ್ತ್‌ಡೇ ದಿನದಂದೇ ಸಚಿನ್ (Sachin) ದಾಖಲೆ ಸರಿಗಟ್ಟಿ ಶತಕ ಸಿಡಿಸಿದ ವಿರಾಟ್ ಕೊಹ್ಲಿಗೆ (Virat Kohli) ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಶುಭಾಶಯಗಳ ಸುರಿಮಳೆಯಾಗಿದೆ.

ಕ್ರಿಕೆಟ್ ದೇವರು ಎಂದೇ ಆರಾಧಿಸಲ್ಪಡುವ ಸಚಿನ್ ತೆಂಡೂಲ್ಕರ್ ವಿರಾಟ್ ಸಾಧನೆಗೆ ಶುಭ ಕೋರಿದ್ದಾರೆ. ತನ್ನ ದಾಖಲೆಯನ್ನು ಸರಿಗಟ್ಟಿದ ಕೊಹ್ಲಿ ಸಾಧನೆಯನ್ನು ಕೊಂಡಾಡಿದ್ದಾರೆ. ಜೊತೆಗೆ ಶೀಘ್ರದಲ್ಲೇ 50ನೇ ಶತಕ (50th Century) ದಾಖಲಿಸಿ ಎಂದು ಶುಭ ಹಾರೈಸಿದ್ದಾರೆ.

ಐಸಿಸಿ ಕೂಡಾ, ಗ್ರೇಟ್ ನೆಸ್ ಮೀಟ್ಸ್ ಗ್ರೇಟ್ ನೆಸ್. ಕಿಂಗ್ ಕೊಹ್ಲಿಗೆ 49ನೇ ಶತಕ ಎಂದು ಬರೆದು ಕೊಹ್ಲಿ ಹಾಗೂ ಸಚಿನ್ ಮುಖಾಮುಖಿಯಾಗಿ ನಿಂತಿರುವ ಫೋಟೋವನ್ನು ಎಕ್ಸ್ ನಲ್ಲಿ ಶೇರ್ ಮಾಡಿಕೊಂಡಿದೆ.

ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಸಚಿನ್ ದಾಖಲೆಯನ್ನು ಸರಿಗಟ್ಟಲು ಸಿಕ್ಕಿದ್ದು ಎಂಥಾ ದಿನ..? ಐತಿಹಾಸಿಕ ಈಡನ್ ಗಾರ್ಡನ್ಸ್ ನಲ್ಲಿ ಕೊಹ್ಲಿ ಬರ್ತ್ ಡೇ ಎಂದು ಬರೆದುಕೊಂಡಿದ್ದಾರೆ.

ಟೀಂ ಇಂಡಿಯಾ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿಯ ಬೆಸ್ಟ್ ಬರ್ತ್ ಡೇ ಗಿಫ್ಟ್ ಎಂದು ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಆಫ್ರಿದಿ (Shahid Afridi) ಬಣ್ಣಿಸಿದ್ದಾರೆ.

ದಾವಣಗೆರೆ ಎಕ್ಸ್ ಪ್ರೆಸ್ ಖ್ಯಾತಿಯ ಭಾರತದ ಮಾಜಿ ಕ್ರಿಕೆಟಿಗ ವಿನಯ್ ಕುಮಾರ್, 35ನೇ ಹುಟ್ಟುಹಬ್ಬಕ್ಕೆ 49ನೇ ಶತಕದ ಮೂಲಕ ವಿರಾಟ್ ತಮಗೆ ತಾವೇ ಗಿಫ್ಟ್ ಕೊಟ್ಟಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು, ನಿಮ್ಮ ಶತಕ ಹಾಗೂ ಸಾಧನೆಗೆ ಅಭಿನಂದನೆ ಎಂದು ಶುಭ ಕೋರಿದ್ದಾರೆ.

ಟೀ ಇಂಡಿಯಾ ಮಾಜಿ ಆಟಗಾದ ಎಸ್.ಬದ್ರಿನಾಥ್ ಕೂಡಾ ವಿರಾಟ್ ಕೊಹ್ಲಿಯ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಶ್ರೀಲಂಕಾದ ಮಾಜಿ ಕ್ರಿಕೆಟಿಗ ರಸೆಲ್ ಅರ್ನಾಲ್ಡ್, ಸೆಂಚುರಿ 49 ವಿರಾಟ್ ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯ ಎಂದು ಶುಭ ಕೋರಿದ್ದಾರೆ.