ಬೆಂಗಳೂರು: ಸ್ಯಾಂಡಲ್‍ವುಡ್ ನ ಹಿರಿಯ ನಟ ಅನಂತ್ ನಾಗ್ ಅವರು ಇಂದು 69ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಅನಂತನಾಗ್ ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಸೇರಿದಂತೆ ಸಪ್ತ ಭಾಷೆಗಳಲ್ಲಿ ಅವರು ನೆನಪಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಂತ್ ನಾಗ್ ಅವರು ಶ್ಯಾಂ ಬೆನೆಗಾಲ್ ಅವರ `ಅಂಕುರ್’ ಚಿತ್ರದಿಂದ ಪಾದಾರ್ಪಣೆ ಮಾಡುವ ಮೂಲಕ ಸಿನಿ ರಂಗಕ್ಕೆ ಎಂಟ್ರಿ ನೀಡಿದ್ದರು.

1973ರಲ್ಲಿ `ಸಂಕಲ್ಪ’ ಎಂಬ ಕನ್ನಡ ಸಿನಿಮಾದ ಮೂಲಕ ಎಂಟ್ರಿ ನೀಡಿದರು. 1977ರ ದೊರೈ ಭಗವಾನರ `ಬಯಲುದಾರಿ’ ಅವರನ್ನು ಕನ್ನಡದ ಮನೆಮನೆಯಲ್ಲೂ ಪರಿಚಿತರಾದರು. ಹಂಸಗೀತೆ, ಕನ್ನೇಶ್ವರ ರಾಮ, ಬರ, ಅವಸ್ಥೆ, ಉದ್ಭವ, ಮಿಂಚಿನ ಓಟ, ಆಕ್ಸಿಡೆಂಟ್, ಬೆಳದಿಂಗಳ ಬಾಲೆ, ಮತದಾನ, ಮೌನಿ, ಅನುರೂಪ, ರಾಮಾಪುರದ ರಾವಣ, ಸಿಂಹಾಸನ, ಅನ್ವೇಷಣೆ, ಮಾಲ್ಗುಡಿ ಡೇಸ್ ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ನಟಿಸುವ ಮೂಲಕ ಚಂದನವನದಲ್ಲಿ ತಮ್ಮದೇ ಚಾಪನ್ನು ಮೂಡಿಸಿದ್ದಾರೆ.

`ಮುಂಗಾರುಮಳೆ’, `ಗಾಳಿಪಟ’ ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರವಹಿಸಿದ್ದರೂ ಚಿತ್ರದ ಚೌಕಟ್ಟಿನಲ್ಲಿ ಅವರು ಪ್ರಧಾನವಾಗಿ ಎದ್ದು ಕಾಣುತ್ತಾರೆ. ಭಾರತದ ಖ್ಯಾತ ಧಾರಾವಾಹಿಗಳಲ್ಲೊಂದಾದ ತಮ್ಮ ಸಹೋದರ ದಿವಂಗತ ಶಂಕರನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಅಭಿನಯಿಸಿದ್ದಲ್ಲದೆ ಕನ್ನಡದಲ್ಲಿಯೂ ಕಿರುತೆರೆಯ ಹಲವಾರು ಪ್ರಸಿದ್ಧ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ. ಇಂದಿಗೂ ಸಹ ಅನಂತ್ ನಾಗ್ ತಮ್ಮನ್ನು ತಾವು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದು, ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.
ಹಿರಿಯ ನಟ ಅನಂತ್ ನಾಗ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು🎂🎉 pic.twitter.com/jY31gGuXjZ
— Lahari Music (@LahariMusic) September 4, 2017
Many More Returns Of The Day – One Of The Finest Actors Of India – Karnataka's Pride – The Handsome #AnanthNag Sir❤️ pic.twitter.com/RI4zYz2xzU
— ಶಿವು ಅಡ್ಡ™ | 𝓼𝓱𝓲𝓿𝓾 𝓪𝓓𝓓𝓪™ (@shivuaDDa) September 4, 2017
Many many happy returns of the day the day to #Ananthnag sir. pic.twitter.com/6Hrye0PYjs
— Pavan Wadeyar (@PavanWadeyar) September 4, 2017
https://twitter.com/OnlyShivanna/status/904542376693161984



Leave a Reply