ಪ್ರಧಾನಿ ವಾಹನದ ಬಳಿ ನುಗ್ಗಲು ಯತ್ನಿಸಿದ ಯುವಕ- ಭದ್ರತಾ ಲೋಪವಾಗಿಲ್ಲ ಅಂದ್ರು ಎಸ್‍ಪಿ

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ (Narendra Modi) ರೋಡ್ ಶೋ ವೇಳೆ ಭದ್ರತಾ ಲೋಪ ಉಂಟಾಗಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ಎಸ್‍ಪಿ ರಿಷ್ಯಂತ್ ಸ್ಪಷ್ಟನೆ ನೀಡಿದ್ದಾರೆ.

ಹೆಲಿಪ್ಯಾಡ್ ನಿಂದ ಪ್ರಧಾನಿಯವರು ತೆರೆದ ವಾಹನದಲ್ಲಿ ರೋಡ್ ಶೋ (Road Show) ನಡೆಸುತ್ತಿದ್ದ ವೇಳೆ ಯುವಕನೊಬ್ಬ ಮೋದಿ ವಾಹನದ ಬಳಿ ನುಗ್ಗಲು ಯತ್ನಿಸಿದ್ದಾನೆ. ತಕ್ಷಣವೇ ಯುವಕನನ್ನು ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಹಾಗೂ ಎಸ್‍ಪಿಜಿ ಅಧಿಕಾರಿಗಳು ತಡೆದಿದ್ದಾರೆ. ಬಳಿಕ ಆತನನ್ನು ತಡೆದು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ. ಮೋದಿ ವಾಹನದ ಬಳಿ ನುಗ್ಗಿದ ಯುವಕ ಕೊಪ್ಪಳ ಭಾಗದ ಬಿಜೆಪಿ ಕಾರ್ಯಕರ್ತ ಎಂಬ ಮಾಹಿತಿ ಲಭಿಸಿತ್ತು.

ರಿಷ್ಯಂತ್ ಸ್ಪಷ್ಟನೆ: ಮೋದಿ ರೋಡ್ ಶೋ ಭದ್ರತಾ ಲೋಪಾ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್ ಪಿ ರಿಷ್ಯಂತ್, ಮೋದಿಯವರ ರೋಡ್ ಶೋ ನಲ್ಲಿ ಯಾವುದೇ ಭದ್ರತಾ ಲೋಪವಾಗಿಲ್ಲ. ಬ್ಯಾರಿಕೇಡ್ ಬಿದ್ದ ಹಿನ್ನೆಲೆ ತಳ್ಳಾಟದಿಂದ ಯುವಕ ಮುಂದೆ ಬಂದಿದ್ದಾನೆ. ಮೋದಿಯವರಿಗೂ ಆ ಯುವಕನಿಗೂ 20 ಅಡಿ ಅಂತರವಿತ್ತು. ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದರು. ಇದನ್ನೂ ಓದಿ: ಮುಸ್ಲಿಮರಿಗೆ ತೊಂದರೆಕೊಡುವ ಉದ್ದೇಶದಿಂದ ಮೀಸಲಾತಿಯಲ್ಲಿ ದ್ರೋಹ – ಸಿದ್ದು ಸಿಡಿಮಿಡಿ

ವಿಜಯಸಂಕಲ್ಪ ಮಾಹಸಂಗಮದಲ್ಲಿ ವೇದಿಕೆಯತ್ತ ನುಗ್ಗಲು ಬಂದ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ವೇದಿಕೆಯತ್ತ ಧಾವಿಸಲು ಅಗಮಿಸಿದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ವೇದಿಕೆ ಸುತ್ತಲು ಎಲ್ಲಾ ದ್ವಾರಬಾಗಿಲು ಬಂದ್ ಮಾಡಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಶೌಚಾಲಯಕ್ಕೆ ತೆರಳಲು ಸಹ ಬಿಡದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಯಿತು.

Comments

Leave a Reply

Your email address will not be published. Required fields are marked *