ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಭದ್ರತಾ ವೈಫಲ್ಯ?- ಡ್ಯಾಂನ ಕ್ರಸ್ಟ್ ಗೇಟ್ ಬಳಿ ಓಡಾಡುತ್ತ ಸೆಲ್ಫಿ ವೀಡಿಯೋ

ಮಂಡ್ಯ: ಕೆಆರ್‌ಎಸ್ ಡ್ಯಾಂನ (KRS Dam) ಕ್ರಸ್ಟ್ ಗೇಟ್ ಬಳಿ ಯುವಕರು ಓಡಾಡುತ್ತ ಸೆಲ್ಫಿ ವೀಡಿಯೋ ಮಾಡಿ ಹುಚ್ಚಾಟ ಮೆರೆದಿದ್ದಾರೆ. ಈ ಘಟನೆ ವಿಶ್ವಪ್ರಸಿದ್ಧ ಕೆಆರ್‌ಎಸ್ ಜಲಾಶಯದಲ್ಲಿ ಭದ್ರತಾ ವೈಫಲ್ಯ ಆಗಿದೆಯೇ ಎಂಬ ಪ್ರಶ್ನೆ ಮೂಡಿಸಿದೆ.

ಡ್ಯಾಂ ಸೆಕ್ಯುರಿಟಿಗೆ ಸರ್ಕಾರ ಕೋಟಿ ಕೋಟಿ ಖರ್ಚು ಮಾಡಿದರೂ ಅಭದ್ರತೆಯ ಮಾತು ಕೇಳಿಬರುತ್ತಿದೆ. ಜಲಾಶಯದ ಸೂಕ್ಷ್ಮ ಪ್ರದೇಶದಲ್ಲಿ ಅಪರಿಚಿತ ಯುವಕರ ಹುಚ್ಚಾಟ ಮೆರೆದಿದ್ದಾರೆ. ಇದನ್ನೂ ಓದಿ: ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಳ – ಕೃಷ್ಣಾ ನದಿಗೆ 29,226 ಕ್ಯೂಸೆಕ್ ನೀರು ಬಿಡುಗಡೆ

ಬಿಗಿ ಬಂದೋಬಸ್ತ್ ಇದ್ದರೂ ಇಲ್ಲಿಗೆ ಬಂದಿದ್ದೇವೆ ಎಂದು ಯುವಕರ ಹುಚ್ಚಾಟ ಆಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದರ ವೀಡಿಯೋ ವೈರಲ್ ಆಗಿದೆ. ಕೆಆರ್‌ಎಸ್ ಡ್ಯಾಂ ಭದ್ರತಾ ವೈಫಲ್ಯದ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಕೈಗಾರಿಕಾ ಭದ್ರತಾ ಪಡೆಯ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡಿದೆ. ದೇಶದಲ್ಲಿ ಅನಾಹುತಗಳು ಸಂಭವಿಸಿದಾಗ ಮಾತ್ರ ಭದ್ರತೆ ಪೋಸ್ ಕೊಡ್ತಾರೆ. ಘಟನೆಗಳು ಮಾಸಿದ ಬಳಿಕ ಭದ್ರತೆ ಅನ್ನೋದು ಮರೀಚಿಕೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.