ಹೊಸ ಕ್ಯಾಪ್ಟನ್ ಗಾಗಿ ಟೀಂ ಇಂಡಿಯಾ ಹುಡುಕಾಟ!

ನವದೆಹಲಿ: ಟೀಮ್ ಇಂಡಿಯಾಕ್ಕೆ ಹೊಸ ನಾಯಕನನ್ನು ಹುಡುಕಬೇಕಿದೆ. ಹೌದು. ವಿರಾಟ್ ಕೊಹ್ಲಿ ತಾತ್ಕಾಲಿಕವಾಗಿ ಕ್ರಿಕೆಟ್‍ನಿಂದ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ.

ಹಾಗಂತ ಗಾಬರಿ ಆಗಬೇಡಿ. ಅವರೇನು ಕ್ರಿಕೆಟ್‍ಗೆ ನಿವೃತ್ತಿ ಘೋಷಿಸುತ್ತಿಲ್ಲ. ಬದಲಿಗೆ ಇನ್ನೊಂದು ತಿಂಗಳು ಆಟದಿಂದ ಫ್ರೀ ಬಿಡಿ ಎಂದು ಮನವಿ ಮಾಡಿದ್ದಾರೆ. ನವೆಂಬರ್ 16ರಿಂದ ಡಿಸೆಂಬರ್ ವರೆಗೆ ಶ್ರೀಲಂಕಾ ವಿರುದ್ಧ ಕ್ರಿಕೆಟ್ ಸರಣಿ ನಡೆಯಲಿದೆ. ಈ ವೇಳೆ ಮೂರು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ-ಟ್ವೆಂಟಿ ಪಂದ್ಯಗಳನ್ನು ಆಡಲಾಗುತ್ತೆ.

ವೈಯಕ್ತಿಕ ಕಾರಣಗಳಿಂದಾಗಿ ಈ ಸರಣಿಯಲ್ಲಿ ತಮಗೆ ಆಡಲು ಸಾಧ್ಯವಾಗುತ್ತಿಲ್ಲ ಎಂದು ಬಿಸಿಸಿಐಗೆ ಮನವಿ ಮಾಡಿದ್ದಾರೆ. ಜನವರಿಯಿಂದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದ ಪ್ರವಾಸ ಕೈಗೊಳ್ಳಲಿದ್ದು, ನಿರಂತರ ಕ್ರಿಕೆಟ್ ಆಡುತ್ತಿರೋ ಕೊಹ್ಲಿ ಅದಕ್ಕೂ ಮೊದಲು ಕೊಂಚ ವಿರಾಮ ಬಯಸಿದ್ದಾರೆ.

ಇಂದು ಬಿಸಿಸಿಐ ಆಯ್ಕೆ ಸಮಿತಿ ಸಭೆ ನಡೆಯಲಿದ್ದು, ನ್ಯೂಜಿಲೆಂಡ್ ವಿರುದ್ಧದ ಮೂರು ಟಿ-ಟ್ವೆಂಟಿ ಪಂದ್ಯಗಳಿಗೆ ಮತ್ತು ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್ ಗಳಿಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡಲಿದೆ.

 

Comments

Leave a Reply

Your email address will not be published. Required fields are marked *