ಬೆಂಗ್ಳೂರಿನಲ್ಲಿ ಇನ್ನೊಂದು ಏರಿಯಾ ಸೀಲ್‍ಡೌನ್!

ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರಿನ ಎರಡು ವಾರ್ಡ್ ಗಳನ್ನು ಮಾತ್ರ ಸೀಲ್‍ಡೌನ್ ಮಾಡಲಾಗಿತ್ತು. ಇದೀಗ ಮತ್ತೊಂದು ಏರಿಯಾವನ್ನು ಸೀಲ್‍ಡೌನ್ ಮಾಡಲಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಜೆಜೆ ನಗರವನ್ನು ಸೀಲ್‍ಡೌನ್ ಮಾಡಿರುವ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ್ ಮಾಹಿತಿ ನೀಡಿದ್ದಾರೆ. ಇದಕ್ಕೂ ಮೊದಲು ಪಾದರಾಯನಪುರ ಮತ್ತು ಬಾಪೂಜಿನಗರವನ್ನು ಸೀಲ್‍ಡೌನ್ ಮಾಡಲಾಗಿತ್ತು. ಈಗ ಇವೆರಡು ನಗರದ ಜೊತೆಗೆ ಜೆಜೆ ನಗರನೂ ಸೀಲ್‍ಡೌನ್ ಮಾಡಬೇಕಾಗಿದೆ. ಸೋಂಕು ಪೀಡಿತ ಪ್ರದೇಶ ಹಾಟ್‍ಸ್ಪಾಟ್‍ನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಕಠಿಣ ಲಾಕ್‍ಡೌನ್‍ಗೆ ನಿರ್ಧರಿಸಿದ್ದೇವೆ. ಇನ್ನೆರಡು ದಿನದಲ್ಲಿ ನಿಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ನೋಡಿದರೆ ಕಡಿಮೆ ಇದೆ. ಹೀಗಾಗಿ ಬೆಂಗಳೂರು ಉತ್ತಮವಾಗಿ ನಿರ್ಮಾಣವಾಗಿದೆ. ಕೆಲವು ಹಾಟ್‍ಸ್ಟಾಟ್‍ಗಳಿವೆ, ಅಂತಹ ಹಾಟ್‍ಸ್ಟಾಟ್ ಸ್ಥಳಗಳನ್ನು ಯಾವ ರೀತಿ ನಿರ್ಬಂಧನೆ ಮಾಡಬೇಕು. ಇನ್ನೂ ತೀವ್ರವಾದ ಕ್ರಮವನ್ನು ವಹಿಸಬೇಕು ಎಂದು ನಿರ್ಧರಿಸಿದ್ದೇವೆ. ಅದೇ ರೀತಿ ಪಾದರಾಯನಪುರ ಮತ್ತು ಬಾಪೂಜಿನಗರವನ್ನು ಸೀಲ್‍ಡೌನ್ ಮಾಡಲಾಗಿದೆ. ಈಗ ಜೆಜೆ ನಗರವನ್ನು ಸೀಲ್‍ಡೌನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಶ್ವಥ್ ನಾರಾಯಣ್ ಮಾಹಿತಿ ನೀಡಿದ್ದಾರೆ.

ಶನಿವಾರ ಮತ್ತೆ 07 ಹೊಸ ಕೊರೊನಾ ಪ್ರಕರಣಗಳ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 214ಕ್ಕೆ ಏರಿಕೆಯಾಗಿದೆ. ಇಂದು ಪತ್ತೆಯಾದ ಏಳು ಪ್ರಕರಣಗಳಲ್ಲಿ ಮೈಸೂರಿನ ನಂಜನಗೂಡಿನ ಕಾರ್ಖಾನೆಯ ಐವರು ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಇನ್ನೂ ಬೆಂಗಳೂರು ಮತ್ತು ಬೀದರಿನಲ್ಲಿ ತಲಾ ಒಂದು ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

Comments

Leave a Reply

Your email address will not be published. Required fields are marked *